Asianet Suvarna News Asianet Suvarna News

Shilpa Shetty: ಕನ್ನಡದಲ್ಲಿ ಮತ್ತೊಮ್ಮೆ ಶಿಲ್ಪಾ ಶೆಟ್ಟಿ ಕಮಾಲ್: 'ಕೆಡಿ'ಯಲ್ಲಿ ಪವರ್ ಫುಲ್ ಲೇಡಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಇದೀಗ ಮತ್ತೆ ಸ್ಯಾಂಡಲ್ ವುಡ್'ಗೆ ಎಂಟ್ರಿ ಕೊಡುತ್ತಿದ್ದು, ಕೆಡಿ ಸಿನಿಮಾದಲ್ಲಿ ಆ್ಯಕ್ಟ್ ಮಾಡಲಿದ್ದಾರೆ.
 

ಮಂಗಳೂರು ಚೆಲುವೆ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಕನ್ನಡದಲ್ಲಿ ಕಮಾಲ್ ಮಾಡಲು ಬರುತ್ತಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಅಭಿನಯದ 'ಕೆಡಿ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದ್ದು, ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಪವರ್ ಫುಲ್ ಪಾತ್ರ ಮಾಡಲಿದ್ದಾರೆ. ಇದು ಕನ್ನಡದಲ್ಲಿ ಅವರ ನಾಲ್ಕನೇ ಸಿನಿಮಾ. ಈ ಹಿಂದೆ ಮೂರು ಬಾರಿ ಸ್ಯಾಂಡಲ್ ವುಡ್ ತೆರೆಮೇಲೆ ನಗು ಚೆಲ್ಲಿ, ನಡು ಬಳುಕಿಸಿ, ಪ್ರೇಕ್ಷಕರ ಎದೆಗೆ ಕಿಚ್ಚು ಹಚ್ಚಿದ್ದಾರೆ ಶಿಲ್ಪಾ ಶೆಟ್ಟಿ. ಅದರಲ್ಲೂ ಪ್ರೀತ್ಸೋದ್ ತಪ್ಪಾ ಚಿತ್ರದಲ್ಲಿನ ಶಿಲ್ಪಾ ಶೆಟ್ಟಿಯ ಗ್ಲಾಮರಸ್ ನೋಟವನ್ನು ಅದ್ಯಾರು ತಾನೆ ಮರೆಯಲು ಸಾಧ್ಯ. ಇದೀಗ ಕೆಡಿಯಲ್ಲಿ ಶಿಲ್ಪಾ ರೆಟ್ರೋ ಸ್ಟೈಲ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾಕಂದ್ರೆ ಕೆಡಿ 80ರ ದಶಕದ ರಕ್ತಸಿಕ್ತ ಕಥೆಯ ಸಿನಿಮಾ. ಶಿಲ್ಪಾ ಶೆಟ್ಟಿ ಎಂಟ್ರಿ ಕೆಡಿ ಖದರ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಬೇಡವೇ ಬೇಡ ಎಂದು ನಿಶ್ಚಿತಾರ್ಥ ಮುರಿದ ವೈಷ್ಣವಿ ಗೌಡ

Video Top Stories