ತೆರೆಮೇಲೆ ಸಿಎಂ ಸಿದ್ಧರಾಮಯ್ಯ ಬಯೋಪಿಕ್: ಟೈಟಲ್ ಏನು?
ತೆರೆಮೇಲೆ ಬರಲು ಸಿದ್ಧವಾಗಿದೆ ಸಿಎಂ ಸಿದ್ಧರಾಮಯ್ಯ ಬಗ್ಗೆ ಸಿನಿಮಾ. ಸಿದ್ಧರಾಮಯ್ಯ ಎಂಬ ನಾನು ಹೆಸರಲ್ಲಿ ಬರ್ತಿದೆ ಸಿನಿಮಾ.
ಸಿದ್ದರಾಮಯ್ಯ, ರಾಜ್ಯದ ನೂತನ ಮುಖ್ಯಮಂತ್ರಿ. ಸಿದ್ದು ಸಿಎಂ ಗದ್ದುಗೆ ಏರಾಗಿದೆ. ರಿಪೋರ್ಟಿಂಗ್ ಸರ್ ಅಂತ ರಾಜ್ಯದ ಜನರಿಗೆ ಸಿದ್ದು ಸೆಲ್ಯೂಟ್ ಹೊಟೆದು ಮತ್ತೊಮ್ಮೆ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿದ್ದು ಸಿಎಂ ಆಗುತ್ತಿದ್ದಂತೆ ಕನ್ನಡ ಚಿತ್ರಜಗತ್ತಿನಲ್ಲೂ ಹೊಸ ಸಂಚಲನ ಸೃಷ್ಟಿಯಾಗಿದೆ. ಯಾಕಂದ್ರೆ ಸಿದ್ದರಾಮಯ್ಯ ಅವರ ಕುರಿತು ಕನ್ನಡದಲ್ಲಿ ಸಿನಿಮಾ ಒಂದು ಸಿದ್ಧವಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರದ್ದು ವರ್ಣ ರಂಜಿನ ವ್ಯಕ್ತಿ. ಸಿದ್ದು ಮಾತಿಗಿಳಿದ್ರೆ ಗಂಟೆಗಟ್ಟಲೆಯಾದ್ರು ಪರವಾಗಿಲ್ಲ ಜನ ಕೇಳಿಸಿಕೊಳ್ತಾರೆ. ಸಿದ್ದುಗೆ ಹುಲಿಯಾ, ಟಗರು ಅಂತ ಪ್ರೀತಿಯಿಂದ ಬಿರುದ್ದು ಕೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಲೈಪ್ ಜರ್ನಿಯ ಸಿನಿಮಾ ಬರುತ್ತೆ ಅಂತ ಹಲವು ವರ್ಷಗಳಿಂದ ಚಿತ್ರತಂಗದಲ್ಲಿ ಸುದ್ದಿ ಹರಿದಾಡ್ತಾನೆ ಇದೆ. ಇದೀಗ ಸಿದ್ದು ಸಿಎಂ ಆಗುತ್ತಿದ್ದಂತೆ ಸಿದ್ಧರಾಮಯ್ಯ ಎಂಬ ನಾನು ಅನ್ನೋ ಟೈಲಟ್ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿದೆ.