Asianet Suvarna News Asianet Suvarna News

ನಟ ಭಯಂಕರ ಸಿನಿಮಾದ ಟ್ರೈಲರ್ ರಿಲೀಸ್: ಪ್ರಥಮ್‌ ಹೇಳಿದ್ದೇನು?

ನಟ ಭಯಂಕರ ಸಿನಿಮಾದ  ಟ್ರೈಲರ್ ರಿಲೀಸ್ ಆಗಿದ್ದು, ಹಾರರ್ ಹಾಗೂ ಕಾಮಿಡಿ ಕಥೆಯಿರುವ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.
 

ನಟ ಭಯಂಕರ ಸಿನಿಮಾದ ಟ್ರೈಲರ್'ನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಿಲೀಸ್ ಮಾಡಿದರು. ಅದ್ದೂರಿಯಾಗಿ ನಡೆದ ಈವೆಂಟ್'ನಲ್ಲಿ ಟ್ರೈಲರ್ ಬಿಡಗಡೆ ಮಾಡಲಾಯಿತು. ಸಿನಿಮಾದಲ್ಲಿ ಪ್ರಥಮ್ ನಾಯಕನಾಗಿ ನಟಿಸಿದ್ರೆ ಉಳಿದಂತೆ ಸಾಯಿ ಕುಮಾರ್, ಶೋಭರಾಜ್, ಹಿರಿಯ ನಟ ಉಮೇಶ್, ಕುರಿ ಪ್ರತಾಪ್, ಓಂ ಪ್ರಕಾಶ್, ಮಜಾ ಟಾಕೀಸ್ ಪವನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರಥಮ್‌ಗೆ ನಾಯಕಿಯಾಗಿ ನಿಹಾರಿಕಾ ಮತ್ತು ಚಂದನಾ ಕಾಣಿಸಿಕೊಂಡಿದ್ದಾರೆ. ಇನ್ನು ಈ ವೇಳೆ ಪ್ರಥಮ್‌ ಮಾತನಾಡಿ, 10 ವರ್ಷದ ಹಿಂದೆ ನನ್ನ ಮೊದಲ ಸಿನಿಮಾ ಅದ್ದೂರಿ 175 ದಿನ ಓಡಿತು. ಸಿನಿಮಾಗೆ ಅಬುದಾಬಾದಿನಲ್ಲಿ ಬೆಸ್ಟ್‌ ಅವಾರ್ಡ್ ಸಿಕ್ಕಿತು ಎಂದು ಹೇಳಿದರು.

ಕಾಂತಾರ ಭರ್ಜರಿ ಸಕ್ಸಸ್: ರಿಷಬ್ ಶೆಟ್ಟಿ ಜೇಬು ಸೇರಿದ ಸಂಭಾವನೆ ಎಷ್ಟು ಗೊತ್ತಾ?