Asianet Suvarna News Asianet Suvarna News

ಪುನೀತ್‌ ನಿಧನಕ್ಕೆ ಸಂತಾಪ ಸೂಚಿಸಿದ ಪರಪ್ಪನ ಅಗ್ರಹಾರ ಕೈದಿಗಳು

ಕರ್ನಾಟಕದ 'ಯುವರತ್ನ' ಪುನೀತ್ ದೈವಾದೀನರಾದ ಹಿನ್ನಲೆಯಲ್ಲಿ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನೂರಾರು ಮಂದಿ ಕೈದಿಗಳು ಕ್ಯಾಂಡಲ್‌ ಹಚ್ಚಿ ಅಪ್ಪುಗೆ ಸಂತಾಪ ಸೂಚಿಸಿದ್ದಾರೆ. 

First Published Oct 31, 2021, 6:38 PM IST | Last Updated Oct 31, 2021, 6:38 PM IST

ಬೆಂಗಳೂರು (ಅ.31): ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ (Puneeth Rajkumar)  ನಂತರ ದೊಡ್ಡದೊಂದು ಶೂನ್ಯ ಆವರಿಸಿದೆ. ನಂಬಲಾಗದ ಸತ್ಯವನ್ನು ಅರಗಿಸಿಕೊಳ್ಳಲು ಚಿತ್ರರಂಗದವರು, ಅಭಿಮಾನಿಗಳು ಕಷ್ಟಪಡುತ್ತಿದ್ದಾರೆ. ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಅಪ್ಪುವಿನಂತಹ ನಟ ಇದ್ದ ಕಾಲದಲ್ಲಿಯೇ ನಾನು ನಟನಾಗಿರುವುದಕ್ಕೆ ಖುಷಿ

ಕರ್ನಾಟಕದ 'ಯುವರತ್ನ' ಪುನೀತ್ ದೈವಾದೀನರಾದ ಹಿನ್ನಲೆಯಲ್ಲಿ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನೂರಾರು ಮಂದಿ ಕೈದಿಗಳು ಕ್ಯಾಂಡಲ್‌ ಹಚ್ಚಿ ಅಪ್ಪುಗೆ ಸಂತಾಪ ಸೂಚಿಸಿದ್ದಾರೆ. ಹಾಗೂ ನಮ್ಮ ಪ್ರೀತಿಯ ಅಪ್ಪು ಎಂದು ಹೂನಲ್ಲಿ ಬರೆದು ಗೌರವ ಸೂಚಿಸಿ, ಎರಡು ನಿಮಿಷ ಮೌನಾಚರಣೆ ಮಾಡಿದ್ದಾರೆ. ಕೈದಿಗಳ ಜೊತೆ ಸೂಪರಿಂಡೆಂಟ್ ರಂಗನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

Video Top Stories