Asianet Suvarna News Asianet Suvarna News

ಬಳ್ಳಾರಿ ಜೈಲು ಸೆಲೆಬ್ರಿಟಿ ದರ್ಶನ್‌ಗೆ ಸಿಕ್ತು ಸ್ವಲ್ಪ ರಿಲೀಫ್: ದಾಸನಿಗಾಗಿ ಫ್ಯಾನ್ಸ್​ ಹೊಸ ಟ್ರೆಂಡ್

ಬಳ್ಳಾರಿ ಜೈಲಿನಲ್ಲಿ 'ಕಾಟೇರ'ನ ಕಷ್ಟಕ್ಕೆ ಸಧ್ಯ ಸ್ವಲ್ಪ ರಿಲೀಫ್ ಸಿಕ್ಕಿದೆ. ಆ ಕಡೆ ದಚ್ಚು ಫ್ಯಾನ್ಸ್​ ಹುಚ್ಚಾಟ ಮತ್ತಷ್ಟು ಹೆಚ್ಚಾಗಿದೆ. ಹಾಗಾದ್ರೆ ಅದೇನು ಅಂತ ನೋಡೋಣ ಬನ್ನಿ. ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ಮೇಲೆ ಕಷ್ಟಗಳು ಮತ್ತಷ್ಟು ಹೆಚ್ಚಾಗಿದ್ವು. ಮಲಗೋಕೆ ಬೆಡ್​ ಕೂಡ ಇಲ್ಲ. 

First Published Sep 3, 2024, 10:56 AM IST | Last Updated Sep 3, 2024, 10:56 AM IST

ಬಳ್ಳಾರಿ ಗಣಿ ದಣಿಗಳ ನಾಡು. ಆದ್ರೆ ಸ್ಯಾಂಡಲ್​ವುಡ್​ಗೆ ನಾನೇ ದಣಿ ಅಂತ ಓಡಾಡ್ತಿದ್ದ ನಟ ದರ್ಶನ್ ಬಳ್ಳಾರಿ ಜೈಲು ವಾಸ ಮಾಡ್ತಾ ಐದು ದಿನ ಆಯ್ತು. ದರ್ಶನ್ ಬಳ್ಳಾರಿ ಜೈಲು ಸೇರಿದ್ಮೇಲೆ ಅಲ್ಲಿ ಹೇಗೋ ಜೀವನ ಅನ್ನೋ ಬಗ್ಗೆ ಭಾರಿ ಚರ್ಷೆ ಆಗಿತ್ತು. ಬಳ್ಳಾರಿ ಜೈಲಿನಲ್ಲಿ 'ಕಾಟೇರ'ನ ಕಷ್ಟಕ್ಕೆ ಸಧ್ಯ ಸ್ವಲ್ಪ ರಿಲೀಫ್ ಸಿಕ್ಕಿದೆ. ಆ ಕಡೆ ದಚ್ಚು ಫ್ಯಾನ್ಸ್​ ಹುಚ್ಚಾಟ ಮತ್ತಷ್ಟು ಹೆಚ್ಚಾಗಿದೆ. ಹಾಗಾದ್ರೆ ಅದೇನು ಅಂತ ನೋಡೋಣ ಬನ್ನಿ. ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ಮೇಲೆ ಕಷ್ಟಗಳು ಮತ್ತಷ್ಟು ಹೆಚ್ಚಾಗಿದ್ವು. ಮಲಗೋಕೆ ಬೆಡ್​ ಕೂಡ ಇಲ್ಲ. 

ಅದಕ್ಕು ದೊಡ್ಡ ಸಂಕಷ್ಟ ಅಂದ್ರೆ ಬೆನ್ನು ಹುರಿ ನೋವಿನ ಸಮಸ್ಯೆಯಿಂದ ಬಳಲುತ್ತಿರೋ ದಚ್ಚುಗೆ ಇಂಡಿಯನ್ ಟಾಯ್ಲೆಟ್​ನಲ್ಲಿ ಕೂರೋಕೆ ಆಗಲ್ಲ ಅನ್ನೋದು. ಹೀಗಾಗಿ ವೆಸ್ಟರ್ನ್ ಟಾಯ್ಲೆಟ್ ಸೌಲಭ್ಯ ಇಲ್ಲ ಕೊನೆ ಪಕ್ಷ ಸರ್ಜಿಕಲ್ ಚೇರ್ ಆದ್ರು ಕೊಡಿ ಅಂತ ದರ್ಶನ್ ಮನವಿ ಮಾಡಿದ್ರು. ಇದೀಗ ವೈದ್ಯರ ವರದಿ ಬಳಿಕ ಸರ್ಜಿಕಲ್ ಚೇರ್‌ಗೆ ಅನುಮತಿ ಸಿಕ್ಕಿದೆ. ದರ್ಶನ್​ ಇರೋ ಸೆಲ್​ಗೆ ಈ ವಿಶೇಷ ವ್ಯವಸ್ಥೆ ಮಾಡಲಾಗ್ತಿದೆ. ಒಂದ್​ ಕಡೆ ಬಾದ್​ ಷಾ ಸುದೀಪ್​ ಅದ್ಭುತ ಅಭಿಮಾನಿಗಳ ಜೊತೆ ಬರ್ತ್​ಡೇ ಮಾಡಿಕೊಂಡಿದ್ದಾರೆ. ಈ ಕಡೆ ನಟ ದರ್ಶನ್ ಫ್ಯಾನ್ಸ್ ಹುಚ್ಚಾಟ ಮತ್ತಷ್ಟು ಹೆಚ್ಚಾಗಿದೆ. 

ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನ ಖೈದಿ ನಂಬರ್​ ಹಾಕ್ಕೋಂಡು ನಾವೇ ಗ್ರೇಟ್ ಎನ್ನುತ್ತಿದ್ದ ದಚ್ಚು ಫ್ಯಾನ್ಸ್​ ಈಗ ಬಳ್ಳಾರಿ ಜೈಲಿನ ದಚ್ಚು ಟೀ ಶರ್ಟ್​ ಹಾಕಿಕೊಂಡು ನಮ್ಮನ ಬಿಟ್ರೆ ಬೇರೆ ಯಾರು ಇಲ್ಲ ಅನ್ನುತ್ತಿದ್ದಾರೆ. ದರ್ಶನ್ ಬಳ್ಳಾರಿ ಜೈಲಿಗೆ ಹೋಗುವಾಗ ಪೂಮಾ ಬ್ರ್ಯಾಂಡ್​ನ ಟೀ ಶರ್ಟ್​ ಹಾಕಿದ್ರು. ಆ ಟೀ ಶರ್ಟ್​ ಮೇಲೆ  ನ್ಯಾಯ, ಘನತೆ, ಸಮಾನತೆ, ಶಾಂತಿ ಅಂತ ಬರೆದಿತ್ತು. ಇದೇ ಟೀ ಶರ್ಟ್​​ ಧರಿಸಿ ದರ್ಶನ್ ಬಳ್ಳಾರಿ ಜೈಲಲ್ಲಿ ಮೂರು ದಿನ ಕಳೆದಿದ್ರು. ಈಗ ಈ ಟೀ ಶರ್ಟ್​​ ಹಾಕಿಕೊಂಡು ಫ್ಯಾನ್ಸ್ ಫೋಸ್​ ಕೊಡುತ್ತಿದ್ದಾರೆ. ರಿ ರಿಲೀಸ್ ಆಗಿರೋ ಕರಿಯಾ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಈ ಮೂಲಕ ಫ್ಯಾನ್ಸ್​ ದಚ್ಚು ಮೇಲಿನ ಅಭಿಮಾನವನ್ನ ಮತ್ತೆ ತೋರಿಸಿದ್ದಾರೆ. 

Video Top Stories