ಕಾಂತಾರದ ಶಿವನ ಪಾತ್ರದ ಹಿಂದೆ ಅಮಿತಾಭ್: ಸೀಕ್ರೆಟ್ ರಿವೀಲ್ ಮಾಡಿದ ರಿಷಬ್
ಕಾಂತಾರ ಸಿನಿಮಾದಲ್ಲಿ ಕಾಡು ಬೆಟ್ಟದ ಶಿವನ ಪಾತ್ರ ಸೃಷ್ಟಿಯಾಗುವುದಕ್ಕೆ, ಬಿಗ್ ಬಿ ಅಮಿತಾಭ್ ಬಚ್ಚನ್ ಪ್ರೇರಣೆ ಅಂತೆ.
ಕಾಂತಾರ ಸಿನಿಮಾದ ಕಾಡುಬೆಟ್ಟದ ಶಿವನ ಪಾತ್ರವನ್ನು ರಿಷಬ್ ಶೆಟ್ಟಿ ತಮ್ಮ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಮೈಮೇಲೆ ಅಂಗಿ-ಲುಂಗಿ, ತಲೆಗೊಂದು ಟವೆಲ್. ಬಾಯಲ್ಲಿ ಬೀಡಿ. ಜೊತೆಗೊಂದು RX 100 ಬೈಕ್. ಇದರ ಜೊತೆಗೆ ಶಿಕಾರಿ ಹುಚ್ಚು ಹಾಗೂ ಸಿಟ್ಟು. ಇದು ಕಾಂತಾರದ ಕಾಡುಬೆಟ್ಟದ ಶಿವ ಕ್ಯಾರೆಕ್ಟರ್. ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟನೆ ನೋಡಿ ಅದೆಷ್ಟೋ ಜನರು ಥ್ರಿಲ್ ಆಗಿದ್ದಾರೆ. ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ರಿಷಬ್, ಆ ಮಟ್ಟಕ್ಕೆ ಮಿಂಗಲ್ ಆಗೋಕೆ ಕಾರಣ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಂತೆ. ಅಮಿತಾಭ್ ಅವರನ್ನು ಆಂಗ್ರಿ ಯಂಗ್ ಮ್ಯಾನ್ ಅಂತ ಕರೆಯುತ್ತಾರೆ. ಕಾರಣ ಅವರ ಪಾತ್ರಗಳು ಆ ರೀತಿ ಇರುತ್ತಿದ್ದವು. ಅಂತಹ ಪಾತ್ರಗಳೇ ಕಾಡುಬೆಟ್ಟದ ಶಿವನಿಗೆ ಪ್ರೇರಣೆ ಅಂತ ರಿಷಬ್ ಶೆಟ್ಟಿ ಹೇಳಿದ್ದಾರೆ.
Super Queen ಬೇಕರಿ- ಪ್ರಿಂಟಿಂಗ್ ಪ್ರೆಸಲ್ಲಿ ಕೆಲ್ಸ ಮಾಡಿದ ನಿರೂಪಕಿ ಹೇಮಲತಾ; ಭಾವುಕ ಮಾತು!