ವಿಚಿತ್ರ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ವಿಶ್ವಸುಂದರಿ: ಅಯ್ಯೋ ಐಶ್ವರ್ಯ ರೈ ಇದೇನಿದು ಅವತಾರ ?
ವಿಶ್ವ ಸುಂದರಿ ಐಶ್ವರ್ಯ ರೈ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಧರಿಸಿದ ಬಟ್ಟೆಯನ್ನು ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ಐಶ್ವರ್ಯ ರೈ ಅಂದ್ರೆ ನೀವೆಲ್ಲಾ ಹೇಳೋದು ವಿಶ್ವ ಸುಂದರಿ ಅಂತ. ಯೆಸ್, ಐಶ್ ವಿಶ್ವಕ್ಕೆ ಸುಂದರಿ ಆದವರು. ಐಶ್ವರ್ಯ ಬ್ಯೂಟಿಗೆ ಭಾರಿ ಡಿಮ್ಯಾಂಡ್ ಇದೆ. ತಾಯಿ ಆದ್ಮೇಲೂ ಐಶ್ ಸೌಂದರ್ಯ ಇನ್ನೂ ಐಶ್ವರ್ಯವಾಗೇ ಇದೆ. ಇದೀಗ ಐಶ್ವರ್ಯ ರೈ ಚಿತ್ರಜಗತ್ತಿನಲ್ಲಿ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಕಾರಣ 76ನೇ ಕಾನ್ ಫಿಲ್ಮ್ ಫೆಸ್ಟಿವಲ್ ನ ರೆಡ್ ಕಾರ್ಪೆಟ್ ಮೇಲೆ ಐಶ್ ಎಂಟ್ರಿ ಕೊಟ್ಟ ರೀತಿ. ಅದೆಷ್ಟೋ ಕೋಟಿ ಅಭಿಮಾನಿಗಳ ದಿಲ್ ಕಿ ದಡ್ಕನ್ ಐಶ್ವರ್ಯ ರೈ ವಿಚಿತ್ರ ಗೌನ್ ಧರಿಸಿ ರಾಣಿಯಂತೆ ಕಂಗೊಳಿಸಿದ್ದಾರೆ. ಸೋಫಿ ಕೌಚರ್ ಕಲೆಕ್ಷನ್‌ನ ಸಿಲ್ವರ್ ಕಲರ್ ಗೌನ್‌ಲ್ಲಿ ಅರ್ಧ ದೇಹ ಸುತ್ತಿಕೊಂಡಂತ ದೊಡ್ಡ ಕುಲಾಯಿ, ಹಿಂದೆ ಉದ್ದ ಟ್ರೇಲ್ ಇರುವಂತಹ ಗೌನ್ ಗಮನ ಸೆಳೆಯುತ್ತಿದೆ. ಐಶ್ ಅವತಾರ ನೋಡಿ ಕೆಲವರು ಮೆಚ್ಚಿಕೊಂಡರೆ ಮತ್ತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಐಶ್ವರ್ಯ ರೈ ವಿಚಿತ್ರ ಗೌನ್ನಲ್ಲಿ ನಡೆದುಬರುತ್ತಿರೋ ವೀಡಿಯೋ ಈಗ ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: Daily Horoscope: ಇಂದು ಕೃಷ್ಣನಿಗೆ ತುಳಸಿ ಅರ್ಚನೆ ಮಾಡಿ, ಸ್ಮರಿಸಿ: ದೇವರ ಕೃಪೆಗೆ ಪಾತ್ರರಾಗಿ..