Asianet Suvarna News Asianet Suvarna News

ಕಾಂತಾರ ಚೆಲುವೆ ಇದೀಗ ಫುಲ್ ಬ್ಯುಸಿ: 'ಸಿಂಗಾರ ಸಿರಿ'ಯ ಮುಂದಿನ ಸಿನಿಮಾ ಯಾವುದು?

ಕಾಂತಾರ ಸಿನಿಮಾ ಭರ್ಜರಿಯಾಗಿ ಯಶಸ್ಸು ಕಂಡಿದ್ದು, ಈ ಮೂಲಕ ನಟಿ ಸಪ್ತಮಿ ಗೌಡ ಅವರಿಗೂ ಭಾರೀ ಡಿಮ್ಯಾಂಡ್ ಸಿಕ್ಕಿದೆ. ಅವರು ಇದೀಗ ಫುಲ್ ಬ್ಯುಸಿ ಆಗಿದ್ದಾರೆ.
 

First Published Oct 26, 2022, 1:03 PM IST | Last Updated Oct 26, 2022, 3:20 PM IST

ಮೂಗುತಿ ಸುಂದರಿ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದಿದ್ದು, ಅದ್ಭುತ ಸಹಜ ಅಭಿನಯದ ಜೊತೆ ಸಪ್ತಮಿ ಅವರ ಮುದ್ದು ಮುಖ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಸಪ್ತಮಿ ಗೌಡ ಈ ಮೊದಲು ‘ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ನಟಿಸಿದ್ದರು. ಇವರಿಗೆ ‘ಕಾಂತಾರ’ ಎರಡನೇ ಚಿತ್ರವಾಗಿದ್ದು, ಸಧ್ಯ ಅವರು ಇದೀಗ ಫುಲ್ ಬ್ಯುಸಿ ಆಗಿದ್ದು, ಅವಕಾಶಗಳು ಭರ್ಜರಿಯಾಗಿ ಬಂದರೂ ಎಲ್ಲವನ್ನೂ ಒಪ್ಪಿಕೊಳ್ಳದೇ ನಿಧಾನವಾಗಿ ಆಯ್ಕೆ ಮಾಡುತ್ತಿದ್ದಾರೆ. ಇನ್ನು ಈಗ ಅವರು ಎಲ್ಲಿಗೆ ಹೋದರೂ, ಶಿವನ ಈ ಲೀಲಾ ಮೇಲೆ ಸಿನಿ ರಸಿಕರ ಕ್ರೇಜ್ ಭಾರೀ ಜೋರಾಗಿದೆ.

Gandhada gudi ಒಂದೇ ದಿನದಲ್ಲಿ ಪ್ರೀಮಿಯರ್ ಶೋ ಟಿಕೆಟ್‌ಗಳು ಸೋಲ್ಡ್‌ ಔಟ್; ಇದು ಕರ್ನಾಟಕದ ಪವರ್!

Video Top Stories