Asianet Suvarna News Asianet Suvarna News

Ramya: ತೂಕ ಇಳಿಸುವ ಚಿಂತೆಯಲ್ಲಿ ಮೋಹಕ ತಾರೆ ರಮ್ಯಾ ....

ಮೋಹಕ ತಾರೆ ರಮ್ಯಾ ಕಮ್ ಬ್ಯಾಕ್ ಆಗಿರುವ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಆದರೆ ಅವರು ಇದೀಗ ವೇಟ್ ಲಾಸ್ ಚಿಂತೆಯಲ್ಲಿದ್ದಾರೆ.
 

ರಮ್ಯಾ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿ ನಿರ್ಮಾಪಕಿ ಆಗಿರುವುದನ್ನು ಅನೌನ್ಸ್ ಮಾಡಿದ್ದರು. ರಮ್ಯಾ ಹೀರೋಯಿನ್ ಆಗ್ತಾರೆ ಅಂದು ಕೊಂಡವರಿಗೆ ನಿರಾಸೆಯಾಗಿತ್ತು. ರಮ್ಯಾ ಸಿಕ್ಕಾಪಟ್ಟೆ ದಪ್ಪ ಆಗಿದ್ದರಿಂದ ಹೀರೋಯಿನ್ ಆಗೋ ಆಸೆಯನ್ನು ಕೈ ಬಿಟ್ಟಿದ್ದರು. ಅಭಿಮಾನಿಗಳ ಒತ್ತಾಸೆಯಿಂದ ಕೊನೆಗೂ ರಮ್ಯಾ ನಾಯಕಿಯಾಗೋ ಮನಸ್ಸು ಮಾಡಿದ್ರು. ಉತ್ತರಕಾಂಡ ಸಿನಿಮಾದಲ್ಲಿ ಡಾಲಿ ಜೊತೆ ನಾಯಕಿಯಾಗಿ ರಮ್ಯಾ ಅನ್ನುವುದು ಅನೌನ್ಸ್ ಆಯ್ತು. ಇದೀಗ ರಮ್ಯಾ ಮೂರು ತಿಂಗಳಿಂದ ವೇಟ್ ಲಾಸ್ ಮಾಡುವ ಪ್ರಾಸೆಸ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಡಯಟ್ ಮಾಡುತ್ತಿದ್ದಾರೆ. ಏನಾದ್ರೂ ಮಾಡಿ, ವೇಟ್ ಲಾಸ್ ಮಾಡಬೇಕು ಅಂತ ಸೀರಿಯಸ್ ಆಗಿ ವರ್ಕ್ ಔಟ್ ಮಾಡುತ್ತಿದ್ದಾರೆ. ಅವರಿಗೆ ತೂಕ ಇಳಿಸುವುದೇ ಈಗ ದೊಡ್ಡ ಚಿಂತೆಯಾಗಿದೆ. ಇನ್ನು ಒಂದುವರೆ ತಿಂಗಳಲ್ಲಿ ರಮ್ಯ ಸಣ್ಣ ಆಗುವ ಟಾರ್ಗೆಟ್ ಇಟ್ಕೊಂಡಿದ್ದು, ಒಳ್ಳೆಯ ಕೋಚ್'ನಿಂದ ಸಲಹೆ ಪಡೆದು ವೇಟ್ ಲಾಸ್ ಮಾಡಿಕೊಳ್ಳುತ್ತಿದ್ದಾರೆ.