Asianet Suvarna News Asianet Suvarna News

ಗಾಂಧಿನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು ರಮ್ಯಾ ಮ್ಯಾರೇಜ್ ವಿಷಯ: ರಾಂಗ್ ಆದ ಮೋಹಕ ತಾರೆ

ತನ್ನ ಮೋಹಕ ಚೆಲುವು ಅದ್ಭುತ ನಟನೆಯಿಂದ ಇಡೀ ಕರುನಾಡನ್ನೇ ಆವರಿಸಿಕೊಂಡಿರೋ ರಮ್ಯಾ ಮದುವೆ ಆಗ್ತಾರೆ ಅಂದ್ರೆ ಸುನ್ಮೇನಾ.. ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ರಮ್ಯಾಗೆ ಇಳಿ ವಯಸ್ಸು ಹತ್ತಿರ ಆಗುತ್ತಿದೆ. ಕ್ವೀನ್​​​​​ ಈಗ 41 ವರ್ಷ ವಯಸ್ಸು. ಆದ್ರೆ ಪದ್ಮಾವತಿ ಇನ್ನೂ ಮದುವೆ ಆಗಿಲ್ಲ ಅನ್ನೋದು ಜಗತ್ತಿಗೆ ಗೊತ್ತಿರೊ ಸತ್ಯ.
 

First Published Sep 12, 2024, 4:45 PM IST | Last Updated Sep 12, 2024, 4:45 PM IST

ಸ್ಯಾಂಡಲ್‌ವುಡ್ ಕ್ವೀನ್ ಯಾರು ಎಂದ್ರೆ ಎಲ್ಲರೂ ಹೇಳೋ ಒಂದೇ ಒಂದು ಹೆಸರು ರಮ್ಯಾ.. ಅದು ಅಂದು ಇಂದು ಎಂದೆಂದೂ ಶಾಶ್ವತವೂ ಹೌದು. ರಮ್ಯಾ ಮತ್ತೆ ಬಣ್ಣ ಹಚ್ಚುತ್ತಾರಂತೆ ಮದುವೆ ಆಗುತ್ತಾರಂತೆ ಅನ್ನೋ ಗೆಲ್ಲೆದ್ದಿದ್ದು ಒಂದೆರಡು ಭಾರಿ ಅಲ್ಲ. ಈ ಮದುವೆ ವಿಷ್ಯಾ ಬಂದಾಗೆಲ್ಲಾ ರಮ್ಯಾ ಮೇಡಂ ನಾರ್ಮಲ್ ಆಗಿ ಆನ್ಸರ್ ಮಾಡುತ್ತಿದ್ರು. ಆದ್ರೆ ಅದ್ಯಾಕೋ ಗೊತ್ತಿಲ್ಲ. ರಮ್ಯಾ ಮದುವೆ ಸುದ್ದಿ ಕಳೆದೆರದು ದಿನದಿಂದ ಕರ್ನಾಟಕದಾದ್ಯಂತ ದಿಬ್ಬಣ ಹೊರಟಿದೆ. ಇದನ್ನ ಕೇಳಿ ಕ್ವೀನ್​​​ ಕಟ ಕಟ ಎನ್ನುತ್ತಿದ್ದಾರೆ. ಈ ಬಗ್ಗೆ ನೋಡೋಣ ಬನ್ನಿ. ಈಗ ರಮ್ಯಾ ಚೈತ್ರಕಾಲ ಮುಂದಕ್ಕೆ ಹೋಗಿದೆ. ಈಗೇನಿದ್ರು ರಮ್ಯಾ ಮದುವೆ ಕಾಲ. ಯಾಕಂದ್ರೆ ಕಲೆದೆರಡು ದಿನದಿಂದ ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಮದುವೆ ವಿಚಾರ ಜಡಿ ಮಳೆಯಂತೆ ಸುರಿಯುತ್ತಿತ್ತು. 

ತನ್ನ ಮೋಹಕ ಚೆಲುವು ಅದ್ಭುತ ನಟನೆಯಿಂದ ಇಡೀ ಕರುನಾಡನ್ನೇ ಆವರಿಸಿಕೊಂಡಿರೋ ರಮ್ಯಾ ಮದುವೆ ಆಗ್ತಾರೆ ಅಂದ್ರೆ ಸುನ್ಮೇನಾ.. ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ರಮ್ಯಾಗೆ ಇಳಿ ವಯಸ್ಸು ಹತ್ತಿರ ಆಗುತ್ತಿದೆ. ಕ್ವೀನ್​​​​​ ಈಗ 41 ವರ್ಷ ವಯಸ್ಸು. ಆದ್ರೆ ಪದ್ಮಾವತಿ ಇನ್ನೂ ಮದುವೆ ಆಗಿಲ್ಲ ಅನ್ನೋದು ಜಗತ್ತಿಗೆ ಗೊತ್ತಿರೊ ಸತ್ಯ. ಹೀಗಾಗಿ ಮೋಹಕ ತಾರೆ ಮದುವೆ ಬಗ್ಗೆ ಕ್ಯೂರಿಯಾಸಿಟಿ ಮೌಂಟ್​ ಎವರಸ್ಟ್​​ನಷ್ಟಿದೆ. ಮೊನ್ನೆ ಮೊನ್ನೆ ಅಷ್ಟೇ ರಮ್ಯಾ ಮದುವೆ ಅಂತೆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ರಮ್ಯಾ ಎಂಗೇಜ್ಮೆಂಟ್ ಆದ್ರು. ನವೆಂಬರ್​ 29ಕ್ಕೆ ರಮ್ಯಾ ಹುಟ್ಟುಹಬ್ಬ. ಆ ದಿನವೇ ಪ್ರೀತಿಸಿದ ಹುಡುಗ, ಉಧ್ಯಮಿಯನ್ನ ಕ್ವೀನ್​ ಕಲ್ಯಾಣ ಆಗುತ್ತಾರೆ ಅಂತೆಲ್ಲಾ ಹೇಳಲಾಗಿತ್ತು. ಅಷ್ಟೆ ಅಲ್ಲ ರಮ್ಯಾ ಮದುವೆ ಆಗೋ ಹುಡುಗ ಇವರೇ ಅಂತ ಉಧ್ಯಮಿ ಪ್ರಭಾವ್ ಚೌಧರಿ ಅಂತ ಅವರ ಫೋಟೋ ಕೂಡ ವೈರಲ್ ಆಗಿತ್ತು.

ಕಳೆದ ಎರಡು ದಿನದ ಹಿಂದೆ ಹುಟ್ಟಿದ್ದ ರಮ್ಯಾ ಮದುವೆ ವಿಚಾರ ಕೇಳಿ ಸ್ವತಂ ಕ್ವೀನ್ ಮೇಡಂ ಅವರೇ ಸಿಟ್ಟಾಗಿ ರಾಂಗ್ ಆಗಿದ್ದಾರೆ. ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿರೊ ರಮ್ಯಾ, ನಟನೆ ಕೌಂಟ್ ಸಿಗದಷ್ಟು ಬಾರಿ ಮದುವೆ ಆಗಿಬಿಟ್ಟಿದೆ. ಮುಂದೆ ನಾನು ಮದುವೆ ಆಗೋವಾಗ ನಿಮಗೆ ಹೇಳುತ್ತೀನಿ, ದಯವಿಟ್ಟು ಸುಳ್ಳು ಸುದ್ದಿ ಹಾಕಬೇಡಿ ಅಂತ ಸೋಷಿಯಲ್ ಮೀಡಿಯಾದಲ್ಲಿ ರಿಕ್ವೆಸ್ಟ್​ ಮಾಡಿದ್ದಾರೆ.  ಇದೀಗ ರಮ್ಯಾ ಪೋಸ್ಟ್ ಸಖತ್ ವೈರಲ್ ಆಗಿದೆ.. ಅಲ್ಲಿಗೆ ಇದೇಲ್ಲಾ ಸುಳ್ಳು ಸುದ್ದಿ ಅಂತೇಳಿ ಎಲ್ಲದಕ್ಕೂ ಬ್ರೇಕ್ ಹಾಕಿದ್ದಾರೆ. ಪದ್ಮಾವತಿ ರಮ್ಯಾ ಮದುವೆ ಕಣ್ತುಂಬಿಕೊಳ್ಳುವ ಆಸೆ ಅವರ ಫ್ಯಾನ್ಸ್​​ಗೆ ದಶಕಗಳಿಂದಲೂ ಇದೆ. ಆದ್ರೆ ಅದ್ಯಾವಾಗ ಮ್ಯಾರೇಜ್ ಆಗ್ತೀನಿ ಅಂತ ರಮ್ಯಾಗೂ ಗೊತ್ತಿಲ್ಲ ಅಂತ ಹತ್ತಾರು ಬಾರಿ ಹೇಳಿದ್ದಾರೆ. ಈಗ ಇದೆಲ್ಲಾ ಸುಳ್ಳು ಸುದ್ದಿ ಅಂತ ರಮ್ಯಾ ಪೋಸ್ಟ್ ಹಾಕಿದ್ದೇ ತಡ. ಫ್ಯಾನ್ಸ್​ಗಿದ್ದ ರಮ್ಯಾ ಮದುವೆ ನೋಡೋ ಆಸೆ ಮತ್ತೆ ಕಮರಿದೆ. 

Video Top Stories