'ದಿಲ್ ಪಸಂದ್' ಬ್ಯೂಟಿ ಹಿಂದೆ ಜಿಮ್ ಖದರ್, ನಿಶ್ವಿಕಾ ನಾಯ್ಡು ಫಿಟ್ನೆಸ್ ಗುಟ್ಟು ರಟ್ಟು!
ನಿಶ್ವಕಾ ನಾಯ್ಯ ಫಿಟ್ನೆಸ್ ಫ್ರೀಕ್.. ಫಿಟ್ ಆಗಿ ಕಾಣಿಸ್ತಿಲ್ಲ ಅಂದ್ರೆ ಈ ಚೆಲುವಾಂತ ಚೆಲುವೆ ಮನೆಯಿಂದ ಆಚೇನೆ ಬರಲ್ವಂತೆ. ಈಗ ಸಪೂರವಾಗಿ ಕಾಣಿಸೋ ನಿಶ್ವಿಕಾ ಮೈಮಾಟದ ಗುಟ್ಟು ಜೆಸ್ಟ್ & ಬೆಸ್ಟ್ ವರ್ಕೌಟು. ಹೀಗಾಗೆ ನಿಶ್ವಿಕಾ ಚೆಂದದ ಮೈಕಟ್ಟು ಇಟ್ಕೊಂಡಿದ್ದಾರೆ..
ನಿಶ್ವಿಕಾ ನಾಯ್ಡು.. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಜೊತೆ ಹಿತ್ತಲಕ ಕರಿಬೇಡ ಮಾವ ಅಂತ ಮೈ ಚಳಿ ಬಿಟ್ಟು, ಡಾನ್ಸ್ ಮಾಡಿರೋದು ಇನ್ನೂ ಕಣ್ಣಲ್ಲಿ ಹಸಿ ಹಸಿಯಾಗೇ ಇದೆ. ಇವಳ ಡಾನ್ಸ್ಗೆ ಗಂಡ್ ಹೈಕ್ಳು ಕ್ಲೀನ್ ಬೌಲ್ಡ್ ಆಗಿ ಲೈಕ್ಸ್ ಮೇಲೆ ಲೈಕ್ಸ್ ಕಮೆಂಟ್ಸ್ ಮಾಡಿ ಕಂಗ್ರಾಸ್ ಹೇಳಿದ್ರು. ಅಷ್ಟೆ ಅಲ್ಲ ಸಿಕ್ಸ್ ಪ್ಯಾಕ್ನಲ್ಲಿ ಮಿಂಚಿದ್ದನ್ನ ನೋಡಿ ನಿಶ್ವಿಕಾ ಫಿಟ್ನೆಸ್ ಬಗ್ಗೆ ಬಗೆ ಬಗೆಯ ಅಕ್ಷರಗಳನ್ನ ಗೀಚಿದ್ರು.
ನಿಶ್ವಕಾ ನಾಯ್ಯ (Nishvika Naidu) ಫಿಟ್ನೆಸ್ ಫ್ರೀಕ್.. ಫಿಟ್ ಆಗಿ ಕಾಣಿಸ್ತಿಲ್ಲ ಅಂದ್ರೆ ಈ ಚೆಲುವಾಂತ ಚೆಲುವೆ ಮನೆಯಿಂದ ಆಚೇನೆ ಬರಲ್ವಂತೆ. ಈಗ ಸಪೂರವಾಗಿ ಕಾಣಿಸೋ ನಿಶ್ವಿಕಾ ಮೈಮಾಟದ ಗುಟ್ಟು ಜೆಸ್ಟ್ & ಬೆಸ್ಟ್ ವರ್ಕೌಟು. ಹೀಗಾಗೆ ನಿಸ್ವಿಕಾ ಚೆಂದದ ಮೈಕಟ್ಟು ಇಟ್ಕೊಂಡಿದ್ದಾರೆ..
ನಿಶ್ವಿಕಾ ದಿನಕ್ಕೆ ಎರಡು ಗಂಟೆ ಜಿಮ್ನಲ್ಲೇ ಕಾಲ ಕಳಿತಾರೆ. ಲೆಕ್ಕ ಹಾಕದಷ್ಟು ಡಿಪ್ಸ್ ಹೊಡೆಯೋ ಈ ಬ್ಯೂಟಿಗೆ ಆ್ಯಬ್ಸ್ ವರ್ಕೌಟ್ ಸಖತ್ ಇಷ್ಟವಂತೆ.
ಹೀಗಾಗೆ ಗಂಡ್ ಹೈಕ್ಳು ಈ ಮುದ್ದು ಮುಖದ ಸುಂದರಿಯನ್ನ ಫಿಟ್ನೆಸ್ನಲ್ಲಿ ಮಾಸ್ಟರ್ ಪೀಸ್ ಅಂತಾರೆ. ಆಣೆ ಮಾಡಿ ಹೇಳುತ್ತೀನಿ ನಾನು ನಿನ್ನವನು ಅಂತ ವರ್ಕೌಟ್ ವೀಡಿಯೋನ ಲೈಕ್ ಮಾಡ್ತಾರೆ. ನಿಶ್ವಿಕಾ ಸೋಷಿಯಲ್ ಮೀಡಿಯಾಗೆ ಹೋದ್ರೆ ಹಾಟ್ ವರ್ಕೌಟ್ ವೀಡಿಯೋಗಳು ಕಣ್ತುಂಬಿಕೊಳ್ಳುತ್ತವೆ. ಹೆಚ್ಚಿನ ಖುಷಿಗೆ ವಿಡಿಯೋ ನೋಡಿ..