Asianet Suvarna News Asianet Suvarna News

ಕೃತಿ-ಪ್ರಭಾಸ್ ನಿಶ್ಚಿತಾರ್ಥ?: ಏನಿದು ಹೊಸ ವದಂತಿ?

ಕೃತಿ ಹಾಗೂ ಪ್ರಭಾಸ್ ಡೇಟಿಂಗ್‌ ಮಾಡುತ್ತಿದ್ದಾರೆ, ಸ್ವಲ್ಪ ದಿನದಲ್ಲಿ ಎಂಗೇಜ್ಮೆಂಟ್  ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗುತ್ತಿದೆ. 

ಪ್ರಭಾಸ್ ಜೊತೆ ಕೃತಿ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು  ಬಾಲಿವುಡ್‌ ನಟ ವರುಣ್‌ ಹೇಳಿದ್ದು ಫುಲ್‌ ಸುದ್ದಿಯಾಗಿದೆ. ಈ ಕಡೆ ಪ್ರಭಾಸ್‌ ಏನೂ ಇಲ್ಲ ಎಂದು ಹೇಳುತ್ತಿದ್ದಾರೆ, ಕೃತಿ ಕೂಡಾ ಇದೆಲ್ಲಾ ಸುಳ್ಳು ಎಂದು ಕ್ಲ್ಯಾರಿಟಿನೂ ಕೊಟ್ಟಿದ್ದಾರೆ. ಆದರೂ ಕೂಡಾ ಈ ಆದಿಪುರುಷ್‌ ಹೀರೊ ಹೀರೋಯಿನ್‌ ಮೇಲೆ ತುಂಬಾ ಡೌಟ್‌ ಇದೆ. ಇನ್ನು ಸಿನಿಮಾ ಪ್ರಚಾರಕ್ಕೆ ಹೀಗೆ ಗಾಸಿಪ್‌ ಹಬ್ಬಿಸುತ್ತಿದ್ದಾರಾ ಎನ್ನುವ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಅದಲ್ಲದೇ ಸಿನಿಮಾ ಪ್ರಚಾರಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದೂ ತುಂಬಾ ಜನ ಕೂಡಾ ಹೇಳುತ್ತಿದ್ದಾರೆ. ಏನೇ ಹೇಳಿ ಇವರ ಇಬ್ಬರ ಸಂಬಂಧದ ಬಗ್ಗೆ ಎಲ್ಲರಿಗೂ ಫುಲ್‌ ಕನ್‌ಫ್ಯೂಜನ್‌ ಇದೆ.