Asianet Suvarna News Asianet Suvarna News

ಮಳವಳ್ಳಿ ಬಾಲಕಿ ಮನೆಗೆ ಹರ್ಷಿಕಾ-ಭುವನ್ ಭೇಟಿ; ತಾಯಿಯ ಆಕ್ರಂದನ ಕೇಳಿ ಕಣ್ಣೀರಿಟ್ಟ ನಟಿ

ಮಳವಳ್ಳಿಯಲ್ಲಿ ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಮನೆಗೆ ನಟಿ ಹರ್ಷಿಕಾ ಪೂಣಚ್ಚ ಹಾಗು ನಟ ಭುವನ್ ಪೊನ್ನಣ್ಣ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. 

First Published Oct 19, 2022, 5:46 PM IST | Last Updated Oct 20, 2022, 11:21 AM IST

ಮಳವಳ್ಳಿಯಲ್ಲಿ ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಮನೆಗೆ ನಟಿ ಹರ್ಷಿಕಾ ಪೂಣಚ್ಚ ಹಾಗು ನಟ ಭುವನ್ ಪೊನ್ನಣ್ಣ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇಂದು (ಅಕ್ಟೋಬರ್ 19) ಬೆಳಿಗ್ಗೆ ಭೇಟಿ ನೀಡಿದ್ದ ಹರ್ಷಿಕ ಬಾಲಕಿಯ ತಾಯಿ ಜೊತೆ ಮಾತನಾಡಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿ ತಂದೆ ತಾಯಿಯ ಆಕ್ರಂದನ ಕರಳು ಕಿವುಚುವ ಹಾಗಿತ್ತು. ನಾವು ಕರ್ನಾಟಕ ಸರ್ಕಾರದಲ್ಲಿ ಮಾಡುವ ಮನವಿ ಇಷ್ಟೆ, ಈ ಕೃತ್ಯ ಎಸಗಿದ ಆ ಕ್ರೂರಿಗೆ ತಕ್ಕ ಕಠಿಣ ಶಿಕ್ಷೆ ಕೊಡುವುದರ ಜೊತೆ ಈ ತರಹದ ಕೃತ್ಯಗಳು ಇನ್ನು ಮುಂದೆ ಎಂದೂ ನಡೆಯದಿರದ ರೀತಿಯಲ್ಲಿ ಕಾನೂನು ಜಾರಿ ಗೊಳಿಸಬೇಕು ಎಂದು ಮನವಿ ಮಾಡಿದರು.

Video Top Stories