ಹರಿಪ್ರಿಯಾ-ವಸಿಷ್ಠ ಎಂಗೇಜ್ಮೆಂಟ್ ವಿಡಿಯೋ ವೈರಲ್; ಹಳದಿ ಸೀರಿಯಲ್ಲಿ ಮಿಂಚಿದ 'ಉಗ್ರಂ' ಬ್ಯೂಟಿ
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ನಟಿ ವಸಿಷ್ಠ ಸಿಂಹ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಗ್ಗೆ ಬಹಿರಂಗ ಪಡಿಸಿದರು.
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ನಟಿ ವಸಿಷ್ಠ ಸಿಂಹ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಗ್ಗೆ ಬಹಿರಂಗ ಪಡಿಸಿದರು. ಅಂದಹಾಗೆ ಇಬ್ಬರ ನಡುವೆ ಪ್ರೀತಿ ಪ್ರಾಂಭವಾಗಿ ಒಂದು ವರ್ಷವಾಗಿದೆ. ವರ್ಷದಿಂದ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಯಲ್ಲಿದ್ದಾರೆ. ಈ ಬಗ್ಗೆ ಇತ್ತೀಚಿಗಷ್ಟೆ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ಹರಿಪ್ರಿಯಾ ಒಂದಿಷ್ಟು ಪೋಟೋಗಳನ್ನು ಶೇರ್ ಮಾಡಿ ಸದ್ಯದಲ್ಲೇ ಎಲ್ಲರನ್ನೂ ಭೇಟಿಯಾಗುತ್ತೀವಿ ಎಂದು ಹೇಳಿದ್ದಾರೆ. ನಿಶ್ಚಿತಾರ್ಥವನ್ನು ವೈಯಕ್ತಿಕವಾಗಿ ನಾವೇ ಅಧಿಕೃತ ಗೊಳಿಸಳು ಬಯಸಿದ್ವಿ ಆದರೆ ಎಲ್ಲಾ ಕಡೆ ಸುದ್ದಿಯಾಗಿದೆ ಎಂದು ಹೇಳಿದ್ದಾರೆ.