Asianet Suvarna News Asianet Suvarna News

ಶಿವರಾಜ್ ಕುಮಾರ್ ಮನೆಗೆ ದಿಢೀರ್ ಭೇಟಿ ಕೊಟ್ಟಿದ್ದೇಕೆ ಬಿಟೌನ್ ಸ್ಟಾರ್ಸ್?

ಬಾಲಿವುಡ್ ಸ್ಟಾರ್ ದಂಪತಿ ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ಕೂಡ ದೊಡ್ಮನೆ ದೊರೆಯ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು ಶಿವಣ್ಣನ ಪ್ರೀತಿಗೆ ಪಾತ್ರರಾಗಿದ್ದಾರೆ.

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಎಲ್ಲಾ ಭಾಷೆಯ ಕಲಾವಿದರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಶಿವಣ್ಣನನ್ನ ಒಮ್ಮೆ ಭೇಟಿ ಆದ್ರೆ ಸಾಕು, ತನ್ನ ಮನೆಯವರಂತೆ ಭಾವಿಸಿ ಸತ್ಕರಿಸ್ತಾರೆ ಹ್ಯಾಟ್ರಿಕ್ ಹೀರೋ. ಇದೀಗ ಬಾಲಿವುಡ್ ಸ್ಟಾರ್ ದಂಪತಿ ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ಕೂಡ ದೊಡ್ಮನೆ ದೊರೆಯ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು ಶಿವಣ್ಣನ ಪ್ರೀತಿಗೆ ಪಾತ್ರರಾಗಿದ್ದಾರೆ. ಬಿಟೌನ್ ಸ್ಟಾರ್ ದಂಪತಿ ಜೆನಿಲಿಯಾ ರಿತೇಶ್, ಹ್ಯಾಟ್ರಿಕ್ ಹೀರೋ ನಿವಾಸಕ್ಕೆ ಭೇಟಿ ಕೊಟ್ಟಿದ್ದೇಕೆ ಗೊತ್ತಾ.? ಗಾಲಿ ಜನಾರ್ಧನ ರೆಡ್ಡಿಯ ಏಕಮಾತ್ರ ಪುತ್ರ, ಕಿರೀಟಿಯ ಸಿನಿಮಾಗಾಗಿ. ಹೌದು, ಕನ್ನಡ ಚಿತ್ರರಂಗದ ಭರವಸೆ ನಾಯಕ ನಟನಾಗೋ ಮುನ್ಸೂಚನೆ ಕೊಟ್ಟಿರೋ ಕಿರೀಟಿ ಚಂದನವನದ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಕಿರೀಟಿ ಸಿನಿಮಾದ ಶೂಟಿಂಗ್ ಶಿವರಾಜ್ ಕುಮಾರ್ ನಿವಾಸ ಇರೋ ಮಾನ್ಯತಾ ಟೆಕ್ಪಾರ್ಪ್‌ನಲ್ಲೇ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜೆನಿಲಿಯಾ ಕೂಡ ನಟಿಸುತ್ತಿದ್ದು, ಶೂಟಿಂಗ್ ಬಿಡುವಿನ ವೇಳೆ ಜೆನಿಲಿಯಾ ದಂಪತಿ ಸೆಂಚುರಿ ಸ್ಟಾರ್ ಮನೆಗೆ ವಿಸಿಟ್ ಮಾಡಿ, ಶಿವಣ್ಣನ ಆಥಿತ್ಯ ಸ್ವೀಕರಿಸಿದ್ದಾರೆ. 

Video Top Stories