Asianet Suvarna News Asianet Suvarna News

Haripriya: ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು: ಎಂಗೇಜ್ ಆದ್ರು ವಸಿಷ್ಠ ಸಿಂಹ & ಹರಿಪ್ರಿಯಾ

ಕಂಚಿನ ಕಂಠದ ಹುಡುಗ ವಸಿಷ್ಠ ಸಿಂಹ ಹಾಗೂ ದುಂಡು ಮಲ್ಲಿಗೆಯಂತ ಹುಡುಗಿ ಹರಿಪ್ರಿಯಾ ಯಾರಿಗೂ ಗೊತ್ತಾಗದ ಹಾಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ‌.
 

ಹರಿಪ್ರಿಯಾ-ವಸಿಷ್ಠ ಸಿಂಹ ಲವ್ ಸ್ಟೋರಿ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇದೆ. ಡ್ಯಾನ್ಸ್ ಕ್ಲಾಸಿನಲ್ಲಿ ಇವರಿಬ್ಬರ ಪ್ರೀತಿ ಮೊಳಕೆ ಒಡೆದಿತ್ತು. ಕೊನೆಗೆ ಎರಡು ಮನ ಸೇರಿ ನಾವಿಬ್ಬರು ಸತಿ ಪತಿಗಳು ಆಗಬೇಕೆಂದು ನಿರ್ಧರಿಸಿ ಮನೆಯವರನ್ನೂ ಒಪ್ಪಿಸಿದ್ರು. ಹೀಗಾಗಿ ಮದುವೆ ಆಗೋಕೆ ತೆರೆ ಮರೆಯಲ್ಲೇ ಎಲ್ಲಾ ತಯಾರಿ ಮಾಡಿದ್ದ ಹರಿಪ್ರಿಯಾ ಕುಟುಂಬ, ಮನೆ ಮಗಳಿಗೆ ಮೂಗು ಚುಚ್ಚಿಸೋ ಶಾಸ್ತ್ರ ಮಾಡಿದ್ರು. ಈಗ ವಸಿಷ್ಠ ಹರಿಪ್ರಿಯಾ ಫ್ಯಾಮಿಲಿ ಮಾತ್ರ ಸೇರಿಕೊಂಡು ಆರ್.ಆರ್ ನಗರದ ಹರಿಪ್ರಿಯಾ ಮನೆಯಲ್ಲಿ ಇಬ್ಬರು ಉಂಗುರ ಬದಲಿಸಿದ್ದಾರೆ. ಹರಿಪ್ರಿಯಾ ವಸಿಷ್ಠರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಹೀಗಾಗಿ ಇಬ್ಬರು ಎಂಗೇಜ್ಮೆಂಟ್ ಮಾಡಿಕೊಳ್ಳೋ ಮೊದಲೇ ದುಬೈಗೆ ಹಾರಿ ಬ್ಯಾಚ್ಯೂಲರ್ ಪಾರ್ಟಿ ಮಾಡಿದ್ದಾರೆ. ಅಷ್ಟೆ ಅಲ್ಲ ನಿಶ್ಚಿತಾರ್ಥಕ್ಕೆ ಬೇಕಾದ ಎಲ್ಲಾ ಶಾಪಿಂಗ್ ಕೂಡ ಅಲ್ಲೇ ಮಾಡಿ ಬಂದಿದ್ದು. ಈಗ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

Thimayya & Thimayya Review ಅನಂತ್‌ನಾಗ್‌ ಉಪಸ್ಥಿತಿಯೇ ಉಡುಗೊರೆ