Kantara; ಯುವ ಜನಾಂಗ ಅಸಡ್ಡೆ ಮಾಡುವುದನ್ನು ನೋಡಿದ್ದೇವೆ- ಉದಯ ಹಾಲಂಬಿ
ನಮ್ಮ ದೈವ ಆರಾಧನೆಗೆ ಪ್ರಪಂಚದಾದ್ಯಂತ ಗುರುತು ಸಿಗುವಂತಾಗಿದೆ, ಸಮಾಜದಲ್ಲಿರುವ ಸಂಘರ್ಷವನ್ನು ಚೆನ್ನಾಗಿ ತೋರಿಸಲಾಗಿದೆ ಎಂದು ನಟ ಉದಯ್ ಹಾಲಂಬಿ ಅವರು ಹೇಳಿದ್ದಾರೆ.
ಕುಂದಾಪುರದ ಹಾಲಾಡಿ ಸಮೀಪದವರಾದ ಉದಯ ಹಾಲಂಬಿ ಅವರು ಜೀವಮಾನವಿಡಿ ರಂಗಭೂಮಿಗಾಗಿ ದುಡಿದಿದ್ದಾರೆ. ತಂದೆಯ ಕಾಲದಿಂದಲೂ ರಂಗಭೂಮಿಗಾಗಿ ದುಡಿದ ಕುಟುಂಬ ಇವರದ್ದು. ಯಾವುದೇ ಸನ್ಮಾನ ಮಾನ್ಯತೆಗಳು ಇವರಿಗೆ ಸಿಗದೇ ಇದ್ದರೂ ಇದೀಗ ಕಾಂತಾರ ಚಿತ್ರದಲ್ಲಿ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಉದಯ್ ಹಾಲಂಬಿ, ದೈವ ನರ್ತಕರದ್ದು ತುಂಬಾ ಕೆಳಮಟ್ಟದ ಬದುಕು. ಈ ಸಿನಿಮಾದಲ್ಲಿ ತೋರಿಸಿದ್ದಕ್ಕಿಂತಲೂ ಕೆಳಮಟ್ಟದಲ್ಲಿ ಬದುಕುವವರನ್ನು ನೋಡಿದ್ದೇನೆ. 70ರ ದಶಕದಲ್ಲಿ ತುಂಬಾ ಸಂಕಷ್ಟ ಅನುಭವಿಸುತ್ತಿದ್ದರು ಎಂದು ಹೇಳಿದರು. ನಮ್ಮ ದೈವ ಆರಾಧನೆಗೆ ಪ್ರಪಂಚದಾದ್ಯಂತ ಗುರುತು ಸಿಗುವಂತಾಗಿದೆ, ಸಮಾಜದಲ್ಲಿರುವ ಸಂಘರ್ಷವನ್ನು ಚೆನ್ನಾಗಿ ತೋರಿಸಲಾಗಿದೆ. ಸಿನಿಮಾ ಶೂಟಿಂಗ್ ವೇಳೆ ಒಂದು ಒಳ್ಳೆಯ ಹಂತಕ್ಕೆ ಈ ಸಿನಿಮಾ ಹೋಗುತ್ತೆ ಅನ್ನೋದು ಗೊತ್ತಾಗಿತ್ತು ಎಂದು ಹೇಳಿದ್ದಾರೆ. ಸಂಸ್ಕೃತಿಯನ್ನು ಮರೆತ ನಮ್ಮವರಿಗೆ ಜಾಗೃತಿ ಮೂಡಿದೆ. ಯುವ ಜನಾಂಗ ತುಂಬಾ ಅಸಡ್ಡೆ ಮಾಡುವುದನ್ನು ನೋಡುತ್ತೇವೆ.ಈ ತರದ ಶಾಖ ತಾಗಿದಾಗ ಮಾತ್ರ ಎಚ್ಚರಗೊಳ್ಳುತ್ತಾರೆ ಎಂದು ಹೇಳಿದರು.