Puneetha Parva; ಅಪ್ಪು ಸಮಾಧಿ ಮುಟ್ಟಿದ್ದು ಮಾತ್ರ ನೆನಪಿದೆ ಬಳಿಕ ಅಲ್ಲಿ ಇರಕ್ಕೆ ಆಗಿಲ್ಲ- ನಟ ಸೂರ್ಯ

ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಸೂರ್ಯ, ನನ್ನ ಪ್ರೀತಿಯ ಸಹೋದರ ಅಪ್ಪು ಇದನ್ನೆಲ್ಲವನ್ನು ನೋಡುತ್ತಿದ್ದಾರೆ, ನನಗೆ ಗೊತ್ತು, ನನಗೆ ಫೀಲ್ ಆಗುತ್ತಿದೆ ಇಲ್ಲೇ ಇದ್ದಾರೆ ಎಂದು ಹೇಳಿದರು. 

First Published Oct 22, 2022, 12:08 AM IST | Last Updated Oct 22, 2022, 12:08 AM IST

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಪುನೀತ ಪರ್ವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಸೌತ್ ಸ್ಟಾರ್‌ಗಳಾದ ರಾಣಾ ದಗ್ಗುಬಾಟಿ, ಸಿದ್ಧಾರ್ಥ್, ಅಖಿಲ್ ಅಕ್ಕಿನೇನಿ, ಸೂರ್ಯ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಯಶ್, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ಸ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಸೂರ್ಯ, ನನ್ನ ಪ್ರೀತಿಯ ಸಹೋದರ ಅಪ್ಪು ಇದನ್ನೆಲ್ಲವನ್ನು ನೋಡುತ್ತಿದ್ದಾರೆ, ನನಗೆ ಗೊತ್ತು, ನನಗೆ ಫೀಲ್ ಆಗುತ್ತಿದೆ ಇಲ್ಲೇ ಇದ್ದಾರೆ ಎಂದು ಹೇಳಿದರು. ಮೈಸೂರಿನ ಸುಜಾತ ಹೋಟೆಲ್‌ನಲ್ಲಿ ಮೊದಲು ಭೇಟಿಯಾಗಿದ್ದು ಎಂದು ಅಪ್ಪು ಜೊತೆಗಿನ ನೆನಪು ತೆರೆದಿಟ್ಟರು. ಸಮಾಧಿಗೆ ಭೇಟಿ ನೀಡಿದಾಗ ಅಲ್ಲಿ ಮುಟ್ಟಿದ್ದು ಮಾತ್ರ ನೆನಪಿದಿದ್ದರು. 5 ನಿಮಿಷ ಕೂಡ ನಿಲ್ಲಲು ಸಾಧ್ಯವಾಗಿಲ್ಲ. ವಾಪಾಸ್ ಬಂದೆ ಎಂದು ಹೇಳಿದರು.