ನಟ ಶ್ರೀಮುರಳಿ ಕಾಲಿಗೆ ಸರ್ಜರಿ; 3 ತಿಂಗಳು ಸಂಪೂರ್ಣ ವಿಶ್ರಾಂತಿ

ಚಿತ್ರೀಕರಣ ವೇಳೆ ಗಾಯಗೊಂಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಕಾಲಿಗೆ ಸರ್ಜರಿ ಮಾಡಲಾಗಿದೆ. 3 ತಿಂಗಳು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. 

First Published Jan 17, 2023, 3:17 PM IST | Last Updated Jan 17, 2023, 3:17 PM IST

ಚಿತ್ರೀಕರಣ ವೇಳೆ ಗಾಯಗೊಂಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಕಾಲಿಗೆ ಸರ್ಜರಿ ಮಾಡಲಾಗಿದ್ದು ಸರ್ಜರಿ ಸಕ್ಸಸ್ ಆಗಿ ಎನ್ನುವ ವಿಚಾರವನ್ನು ಶ್ರೀಮುರಳಿ ತಂಡ ಬಹಿರಂಗ ಪಡಿಸಿದೆ. ಅನೇಕ ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ ಸಕ್ಸಸ್ ಆಗಿದ್ದು ಶ್ರೀಮುರಳಿ ಇಂದು (ಜನವರಿ 17) ಡಿಶ್ಚಾರ್ಜ್ ಆಗಿದ್ದಾರೆ. ಶ್ರೀಮುರಳಿ ಆಸ್ಪತ್ರೆಯಿಂದ ಮನೆಗೆ ಹೊರಟಿರುವ ವಿಡಿಯೋ ಲಭ್ಯವಾಗಿದೆ. ವೀಲ್ ಚೇರ್ ಮೇಲೆ ಆಸ್ಪತ್ರೆಯಿಂದ ಮನೆಗೆ ಮರಳಿದ ಶ್ರೀಮುರಳಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಗೆ ಧನ್ಯವಾದ ತಿಳಿಸಿದರು. ಶ್ರೀಮುರಳಿ ಬರೋಬ್ಬರಿ 3 ತಿಂಗಳುಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಬಘೀರ ಸಿನಿಮಾದ ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆ ಇದೆ.