Asianet Suvarna News Asianet Suvarna News

ಪುನೀತ ಪರ್ವದಲ್ಲಿ ಕಾಂತಾರ ಗುಣಗಾನ ಮಾಡಿದ ಪ್ರಕಾಶ್ ರೈ

ಪುನೀತ ಪರ್ವ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್​ ರಾಜ್ ಅವರು, ನಟ ಪುನೀತ್ ರಾಜ್ ಕುಮಾರ್ ಅವರ ಗುಣಗಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಪ್ಪು ಇದ್ದಿದ್ದರೆ ಮೊದಲು ಅವರು ಕಾಂತಾರ ಬಗ್ಗೆ ಮಾತಾಡ್ತಿದ್ರು ಎಂದು ಅವರು ಹೇಳಿದರು.

First Published Oct 22, 2022, 11:04 AM IST | Last Updated Oct 22, 2022, 11:04 AM IST

ಅಪ್ಪು ಇಲ್ಲ ಎಂದು ನಾನು ಒಪ್ಪಿಕೊಳ್ಳಲ್ಲ. ಗಂಧದಗುಡಿ ಕಾರ್ಯಕ್ರಮದಲ್ಲಿ ಅವರು ಇದ್ದಿದ್ರೆ ಕಾಂತಾರ ಎಂದು ಹೇಳುತ್ತಿದ್ದರು. ಯಾಕಂದ್ರೆ ಅಪ್ಪುಗೆ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬಂದರೆ ತುಂಬಾ ಖುಷಿ. ಒಳ್ಳೆಯ ಪ್ರತಿಭೆಗಳು ಇದ್ರೆ, ತುಂಬಾ ಪ್ರೀತಿಸೋರು ಎಂದು ತಿಳಿಸಿದರು. ಹಾಗೆ ಅವರು ರಿಷಬ್ ಶೆಟ್ಟಿಯನ್ನು ಹಾಗೂ ಹೊಂಬಾಳೆ ತಂಡವನ್ನು ಅಪ್ಪಿಕೊಳ್ಳುತ್ತಿದ್ದರು ಎಂದರು. ಅಪ್ಪು ಇದಾರೆ ಅಂದುಕೊಂಡು ಅವರಿಗೆ ಧನ್ಯಾವಾದ ಹೇಳಿಬಿಡುವ , ಧನ್ಯವಾದ ರಿಷಬ್, ಕನ್ನಡ ಜನಪದವನ್ನು ಅದರ ಸೊಗಡನ್ನು ಈ ಮಣ್ಣಿನ ಪ್ರತಿಭೆಯನ್ನು ಮಣ್ಣಿನ ಶ್ರೀಮಂತಿಕೆಯನ್ನು ಪ್ರಪಂಚದ ಉದ್ದಕ್ಕೂ ತೆಗೆದುಕೊಂಡು ಹೋಗಿರುವುದಕ್ಕೆ ಎಂದು ಹೇಳಿದರು. ಇನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅಪ್ಪು ಎಕ್ಸ್‌ಪ್ರೆಸ್‌ ಎನ್ನುವ ಆಂಬುಲೆನ್ಸ್ ಬಡವರಿಗಾಗಿ ಓಡಬೇಕು ಎಂದು ಪ್ರಕಾಶ ರೈ ಹೇಳಿದರು.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Video Top Stories