ಮೊದಲ ಬಾರಿಗೆ ಎಲೆಕ್ಷನ್ ರಣ ಕಣದಲ್ಲಿ ಧ್ರುವ ಸರ್ಜಾ: ನಟನಿಗಾಗಿ ಮುಗಿ ಬಿದ್ದ ಡೈ ಹಾರ್ಡ್ ಫ್ಯಾನ್ಸ್!
ಅರಕಲಗೂಡಿನಲ್ಲಿ ಆಕ್ಷನ್ ಪ್ರಿನ್ಸ್ ಅಬ್ಬರದ ಪ್ರಚಾರ.!
ಇದೇ ಫಸ್ಟ್ ಟೈಂ ಚುನಾವಣಾ ಪ್ರಚಾರಕ್ಕೆ ಬಂದ ಧ್ರುವ!
ಆಕ್ಷನ್ ಪ್ರಿನ್ಸ್ ಚುನಾವಣಾ ಕಾವು ಹೆಚ್ಚಿಸಿದ್ದೇಕೆ ಗೊತ್ತಾ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಬೇಜಾನ್ ಸಿನಿಮಾ ಕೆಲಸ ಇದೆ. ಒಂದ್ ಕಡೆ ಮಾರ್ಟಿನ್ ಹಾಡಿನ ಚಿತ್ರೀಕರಣ ಬಾಕಿ ಇದೆ. ಮತ್ತೊಂದ್ ಕಡೆ ಪ್ರೇಮ್ ಡೈರೆಕ್ಷನ್‌ನ ಕೆಡಿ ಶೂಟಿಂಗ್ ಮಾಡಬೇಕಿದೆ. ಆದ್ರೆ ಧ್ರುವ ಮಾತ್ರ ಆ ಸಿನಿಮಾ ಕೆಲಸ ಬಿಟ್ಟು ಚುನಾವಣಾ ರಣಕಣಕ್ಕೆ ಧುಮುಕಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರ ಹಾಗೆ ಧ್ರುವ ಸರ್ಜಾ ಕೂಡ ತನ್ನ ಆತ್ಮೀಯರನ್ನ ಗೆಲ್ಲಿಸೋಕೆ ಪಣ ತೊಟ್ಟಿದ್ದು ಅದ್ಧೂರಿ ರೋಡ್ ಷೋ ಮಾಡುತ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಅರಕಲಗೋಡು ಜೆಡಿಎಸ್ ಅಭ್ಯರ್ಥಿ ಕೃಷ್ಣೇಗೌಡ ಪರ ಎರಡು ದಿನ ಪ್ರಚಾರ ಮಾಡಿದ್ದಾರೆ. ಧ್ರುವ ಕೃಷ್ಣೇಗೌಡ ಪರ ಪ್ರಚಾರಕ್ಕೆ ಹೋಗಿದ್ದು ಒಂದೇ ಕಾರಣಕ್ಕೆ. ಅದೇನ್ ಗೊತ್ತಾ.? ಕೃಷ್ಣೇಗೌಡ 1000ಕ್ಕೂ ಹೆಚ್ಚು ಹಸುಗಳನ್ನ ಸಾಕಿದ್ದಾರೆ. ರೈತರ ಬಗ್ಗೆ ಕಾಳಜಿ ಇದೆ ಅನ್ನೋ ಕಾರಣಕ್ಕಂತೆ. ಒಟ್ಟಿನಲ್ಲಿ ಸೈಲೆಂಟ್ ಆಗಿದ್ದ ಆಕ್ಷನ್ ಪ್ರಿನ್ಸ್ ಚುನಾವಣೆ ಪ್ರಚಾರದಲ್ಲಿ ವೈಲೆಂಟ್ ಆಗಿ ರೋಡ್ ಷೋ ಮಾಡಿದ್ದಾರೆ.