Asianet Suvarna News Asianet Suvarna News

ಮಾಸ್ ಎಂಟ್ರಿ ಕೊಟ್ಟ ಧೀರೆನ್ ರಾಮ್ ಕುಮಾರ್

ಅಣ್ಣಾವ್ರ ಕುಟುಂಬದಿಂದ ಚಿತ್ರರಂಗಕ್ಕೆ ಬರುತ್ತಿರೋ ಮೂರನೇ ತಲೆಮಾರು ಧೀರೆನ್ ರಾಮ್ ಕುಮಾರ್. ಧೀರೆನ್ ನಟಿಸಿರೋ ಶಿವ 143 ಸಿನಿಮಾ ಹಾಡುಗಳು ಟೀಸರ್ಅನ್ನ ನೋಡಿ ನೀವೆಲ್ಲಾ ಖುಷಿ ಪಟ್ಟಿದ್ರಿ. ಇದೀಗ ಧೀರೆನ್ ತನ್ನ ತಾತನ ಇನ್ಸ್ಪರೇಷನ್ ಹಾಗು ಮಾವ ಶಿವರಾಜ್ ಕುಮಾರ್ ಚಹರೆ ಹೊತ್ತು ಶಿವ 143 ಆಗಿ ಬೆಳ್ಳಿತೆರೆಗೆ ಬರೋದಕ್ಕೆ ಸಿದ್ಧರಾಗಿದ್ದಾರೆ.

First Published Aug 20, 2022, 4:34 PM IST | Last Updated Aug 20, 2022, 4:34 PM IST

ಧೀರೆನ್ ರಾಮ್ ಕುಮಾರ್. ಡಾ| ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ರಾಜ್ ಕುಮಾರ್, ರಾಮ್ ಕುಮಾರ್ರ ಮುದ್ದಿನ ಮಗ. ಅಣ್ಣಾವ್ರ ಕುಟುಂಬದಿಂದ ಚಿತ್ರರಂಗಕ್ಕೆ ಬರುತ್ತಿರೋ ಮೂರನೇ ತಲೆಮಾರು ಧೀರೆನ್ ರಾಮ್ ಕುಮಾರ್. ಧೀರೆನ್ ನಟಿಸಿರೋ ಶಿವ 143 ಸಿನಿಮಾ ಹಾಡುಗಳು ಟೀಸರ್ಅನ್ನ ನೋಡಿ ನೀವೆಲ್ಲಾ ಖುಷಿ ಪಟ್ಟಿದ್ರಿ. ಇದೀಗ ಧೀರೆನ್ ತನ್ನ ತಾತನ ಇನ್ಸ್ಪರೇಷನ್ ಹಾಗು ಮಾವ ಶಿವರಾಜ್ ಕುಮಾರ್ರ ಚಹರೆ ಹೊತ್ತು ಶಿವ 143 ಆಗಿ ಬೆಳ್ಳಿತೆರೆಗೆ ಬರೋದಕ್ಕೆ ಸಿದ್ಧರಾಗಿದ್ದಾರೆ. ಅದರ ಮೊದಲ ಝಲಕ್ ಶಿವ 143 ಟ್ರೇಲರ್ ರಿಲೀಸ್ ಆಗಿದೆ. ಇದು ಶಿವ 143 ಸಿನಿಮಾದ ಹೊಸ ಟ್ರೈಲರ್, ದೊಡ್ಮನೆ ಕೂಸಿನ ಖಡಕ್ ಎಂಟ್ರಿಗೆ ಸಾಕ್ಷಿಯಾಗ್ತಿದೆ. ಮೊದಲ ಬಾಲಿನಲ್ಲೇ ಸಿಕ್ಸ್ ಹೊಡೆದಿರೋ ಧೀರನ್ ಹೊಸ ಅವತಾರವೂ ಮಜಾಬೂತಾಗಿದೆ. ಶತ್ರುಗಳನ್ನ ಗೆಲ್ಲೋಕೆ ತುಂಬಾನೇ ಅವಕಾಶಗಳಿರುತ್ವೆ ಅಂತಾನೇ ಶುರುವಾಗೋ ಶಿವ 143 ಟ್ರೈಲರ್ ಮಾಸ್ ಎಲಿಮೆಂಟ್ ಖಜಾನೆಯ ಹಾಗಿದೆ. ಇರದ ಜೊತೆ ಅಣ್ಣಾವ್ರ ಸಿನಿಮಾ ಡೈಲಾಗ್, ಹಾಗು ಶಿವರಾಜ್ಕುಮಾರ್ರ ಓಂ ಸಿನಿಮಾ ಶೇಡ್ ಟ್ರೈಲರ್ನಲ್ಲಿ ಕಾಣುತ್ತೆ. ಶಿವಣ್ಣ ಓಂ ಸಿನಿಮಾದಲ್ಲಿ ಹಿಡಿದ ಲಾಂಗ್ಅನ್ನೇ ಧೀರೆನ್ ರಾಮ್ ಕುಮಾರ್ ಕೈಗೆತ್ತಿಕೊಂಡಿದ್ದಾರೆ. 

Video Top Stories