ದೇವಿ ದರ್ಶನಕ್ಕೆ ಸಜ್ಜಾಗ್ತಿರೋ ದರ್ಶನ್, ಪತ್ನಿ ವಿಜಯಲಕ್ಚ್ಮೀ ಜೊತೆ ಹರಕೆ ತೀರಿಸ್ತಾರಾ?

ಪತಿ ಜೈಲಿಗೆ ಹೋದ ದಿನದಿಂದಲೂ ವಿಜಯಲಕ್ಷ್ಮೀ ಕಂಡ ಕಂಡ ದೇವರ ಸನ್ನಿಧಾನಗಳನ್ನ ಸುತ್ತಿದ್ರು. ಬೆಂಗಳೂರಿನ ಬಂಡೆ ಮಾಕಾಳಮ್ಮ ದೇಗುಲದಿಂದ ಹಿಡಿದು ಮೈಸೂರು ಚಾಮುಂಡೇಶ್ವರಿವರೆಗೆ... ಕೊಲ್ಲುರು ಮೂಕಾಂಬಿಕೆಯಿಂದ ಹಿಡಿದು ಅಸ್ಸಾಂ.. 

First Published Dec 23, 2024, 4:01 PM IST | Last Updated Dec 23, 2024, 4:06 PM IST

ರೆಗ್ಯೂಲರ್ ಬೇಲ್ ಸಿಕ್ಕು, ಆಸ್ಪತ್ರೆಯಿಂದ ಡಿರ್ಸಾರ್ಜ್ ಆದ ಮೇಲೆ ದರ್ಶನ್ ಫುಲ್ ರಿಲ್ಯಾಕ್ಸ್ ಮೂಡ್​​ನಲ್ಲಿದ್ದಾನೆ. ಮೈಸೂರು ಬಳಿಕ ಫಾರ್ಮ್​ಹೌಸ್ ಸೇರಿರೋ ದರ್ಶನ್ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೀತಿದ್ದಾರೆ. ಈ ನಡುವೆ ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಲುವಾಗಿ ಕಟ್ಟಿಕೊಂಡ ಹರಕೆಗಳನ್ನ ತೀರಿಸೋಕೆ ಸಜ್ಜಾಗಿದ್ದಾರಂತೆ. ಪತಿಗೆ ದೇವಿ ದರ್ಶನ ಮಾಡಿಸಲಿದ್ದಾರಂತೆ. 

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆಗಿ ಆರು ತಿಂಗಳ ಬಳಿಕ ದಾಸನಿಗೆ ಕೊಂಚ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ರೆಗ್ಯೂಲರ್ ಬೇಲ್ ಕೊಟ್ಟ ಮೇಲೆ ದರ್ಶನ್​ಗೆ ಕೊಂಚ ರಿಲೀಫ್ ಸಿಕ್ಕಿದೆ. ಅದ್ರಲ್ಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅಂತೂ ನಿಟ್ಟುಸಿರು ಬಿಟ್ಟಿದ್ದಾರೆ.

ಪತಿ ಜೈಲಿಗೆ ಹೋದ ದಿನದಿಂದಲೂ ವಿಜಯಲಕ್ಷ್ಮೀ ಕಂಡ ಕಂಡ ದೇವರ ಸನ್ನಿಧಾನಗಳನ್ನ ಸುತ್ತಿದ್ರು. ಬೆಂಗಳೂರಿನ ಬಂಡೆ ಮಾಕಾಳಮ್ಮ ದೇಗುಲದಿಂದ ಹಿಡಿದು ಮೈಸೂರು ಚಾಮುಂಡೇಶ್ವರಿವರೆಗೆ... ಕೊಲ್ಲುರು ಮೂಕಾಂಬಿಕೆಯಿಂದ ಹಿಡಿದು ಅಸ್ಸಾಮ್ ನ ಕಾಮಾಕ್ಯ ದೇವಿಯವರೆಗೆ ಎಲ್ಲ ಶಕ್ತಿದೇವತೆಗಳ ಸನ್ನಿಧಾನಕ್ಕೆ ಹೋಗಿ ಹರಕೆ ಕಟ್ಟಿದ್ರು.

ದರ್ಶನ್​ಗೆ ಸ್ತ್ರೀದೋಷ ತಗುಲಿದೆ. ಅದಕ್ಕೆ ಅವರಿಗೆ ಇಂಥಾ ದೊಡ್ಡ ಆಪತ್ತು ಬಂದೆರಗಿದೆ ಅಂತ ಅದ್ಯಾರೋ ಜ್ಯೋತಿಷಿ ವಿಜಯಲಕ್ಷ್ಮೀ ಬಳಿ ಹೇಳಿದ್ರಂತೆ. ಅಂತೆಯೆ ವಿಜಯ ಲಕ್ಷ್ಮೀ ಶಕ್ತಿದೇವತೆಗಳ ದೇಗುಲ ಸುತ್ತಿ ಪತಿಯನ್ನ ಕಷ್ಟದಿಂದ ಪಾರುಮಾಡುವಂತೆ ಹರಕೆ ಕಟ್ಟಿಕೊಂಡಿದ್ರು. ಹಾಗಿದ್ರೆ ಮುಂದೇನು ಅನ್ನೋದಕ್ಕೆ ಈ ವಿಡಿಯೋ ನೋಡಿ..