ದರ್ಶನ್‌ಗೆ ಬೇಲ್ ಸಿಕ್ಕರೂ ಸಿಂಧೂರ ಲಕ್ಷ್ಮಣ ಸೆಟ್ಟೇರೋದು ಡೌಟ್?
ದರ್ಶನ್‌ಗೆ ಬೇಲ್ ಸಿಕ್ಕಿದ್ದರೂ, ಕೋರ್ಟ್ ವಿಧಿಸಿರುವ ಷರತ್ತುಗಳಿಂದಾಗಿ ಸಿಂಧೂರ ಲಕ್ಷ್ಮಣ ಚಿತ್ರೀಕರಣ ಅನುಮಾನ. ಬೆಂಗಳೂರು ಹೊರಗೆ ಚಿತ್ರೀಕರಣಕ್ಕೆ ಪ್ರತ್ಯೇಕ ಅನುಮತಿ ಪಡೆಯಬೇಕಿದೆ. ದರ್ಶನ್ ಮತ್ತೆ ಬಣ್ಣ ಹಚ್ಚಲು ಸಿದ್ಧರಿದ್ದರೂ, ಈ ಸಿನಿಮಾ ಸೆಟ್ಟೇರೋದು ಅನುಮಾನ.
ದರ್ಶನ್‌ಗೆ ಕಾಟೇರ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟ ತರುಣ್ ಸುಧೀರ್, ಒನ್ಸ್ ಅಗೈನ್ ದರ್ಶನ್ ಜೊತೆಯಲ್ಲಿ ಬಿಗ್ ಹಿಸ್ಟಾರಿಕಲ್ ಸಿನಿಮಾ ಮಾಡೋದಕ್ಕೆ ಸಜ್ಜಾಗಿದ್ರು. ದರ್ಶನನ್ನು ವೀರ ಸಿಂಧೂರ ಲಕ್ಷ್ಮಣನಾಗಿ ತೆರೆ ಮೇಲೆ ತೋರಿಸೋದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ರು. ಆದ್ರೀಗ ದರ್ಶನ್‌ಗೆ ಬೇಲ್ ಸಿಕ್ಕರೂ ಈ ಸಿನಿಮಾ ಸೆಟ್ಟೇರೋದು ಡೌಟ್ ಎನ್ನಲಾಗ್ತಾ ಇದೆ.
ಯೆಸ್ ದರ್ಶನ್‌ಗೆ ಹೈಕೋರ್ಟ್ನಿಂದ ರೆಗ್ಯೂಲರ್ ಬೇಲ್ ಮಂಜೂರಾಗಿದೆ. ಇಷ್ಟು ದಿನ ಆಸ್ಪತ್ರೆ ಬಿಟ್ಟು ಹೊರಬಾರದ ದರ್ಶನ್ ಇನ್ಮುಂದೆ ಮುಕ್ತವಾಗಿ ಓಡಾಡೋದಕ್ಕೆ ಅವಕಾಶ ಇದೆ. ಸೋ ದಾಸ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾನೆ. ಸರ್ಜರಿ ನೆಪ ಹೇಳಿ ಬಂದವನು, ಯಾವುದೇ ಸರ್ಜರಿ ಮಾಡಿಸಿಕೊಳ್ಳದೇ ಮನೆಗೆ ಮರಳಿದ್ದಾನೆ.
ಇನ್ನೇನು ಬೇಲ್ ಸಿಕ್ಕಾಯಿತಲ್ಲಾ ದರ್ಶನ್ ಮತ್ತೆ ಬಣ್ಣ ಹಚ್ಚಬಹುದು ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ. ಆದ್ರೆ ಇಷ್ಟು ಬೇಗ ದಾಸ ಮತ್ತೆ ಬಣ್ಣ ಹಚ್ಕೊಂಡು ನಟನೆ ಮಾಡೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ಕೋರ್ಟ್ ದರ್ಶನ್‌ಗೆ ಬೇಲ್ ಕೊಡುವ ಮುನ್ನ ಹಲವು ಷರತ್ತುಗಳನ್ನ ವಿಧಿಸಿದೆ.
ಸೆಷೆನ್ಸ್ ಕೋರ್ಟ್ ವ್ಯಾಪ್ತಿಯನ್ನ ಬಿಟ್ಟು ಹೊರಹೋಗುವಂತಿಲ್ಲ ಅನ್ನೋ ಷರತ್ತು ವಿಧಿಸಲಾಗಿದೆ. ಸೋ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗವೇಕು ಅಂದ್ರೆ ಬೆಂಗಳೂರಲ್ಲೇ ಶೂಟಿಂಗ್ ಇಟ್ಟುಕೋಬೇಕು. ಅಥವಾ ಬೇರೆ ಕಡೆ ಶೂಟಿಂಗ್ ಮಾಡೋದಾದ್ರೆ ಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಅನುಮತಿಯನ್ನ ಪಡೆಯಬೇಕಿದೆ.
ಈ ಚಿತ್ರಕ್ಕೆ ತರುಣ್ ನಿರ್ಮಾಪಕ ಅಷ್ಟೇ, ನಿರ್ದೇಶಕರು ಬೇರೆಯವರು. ತರುಣ್ ತಮ್ಮ ನಿರ್ದೇಶನದ ಹೊಸ ಚಿತ್ರ ಇನ್ನೂ ಘೋಷಿಸಿಲ್ಲ. ಆಧ್ರೆ ಸಿಂಧೂರ ಲಕ್ಷ್ಮಣ ಸೆಟ್ಟೇರೋದು ಮಾತ್ರ ಡೌಟ್. ಈ ಕೊಲೆ ಆರೋಪದ ನಂತರ ಸ್ವಾತಂತ್ರವೀರನ ಪಾತ್ರದಲ್ಲಿ ದರ್ಶನ್ ನಟಿಸಿದ್ರೆ ಜನ ಒಪ್ತಾರಾ ಗೊತ್ತಿಲ್ಲ.. ಡೆವಿಲ್, ಡಿ-58 ನಂತರ ಈ ಸಿನಿಮಾ ಶುರುವಾಗುತ್ತಾ ಗೊತ್ತಿಲ್ಲ.. ಸದ್ಯಕ್ಕಂತೂ ಸಿಂಧೂರ ಲಕ್ಷ್ಮಣ ಸೆಟ್ಟೇರೋದು ಡೌಟ್ ಎನ್ನಲಾಗ್ತಾ ಇದೆ.