ಮಂಡ್ಯದಲ್ಲಿ ಅಭಿ-ಅವಿವಾ ಬೀಗರೂಟ: ಸಾವಿರಾರು ಜನರನ್ನು ನೋಡಿ ಬೆಚ್ಚಿಬಿದ್ದ ಅವಿವಾ!

ಸುಮಾರು 6000 ಮಂದಿ ಒಂದು ಪಂಕ್ತಿಯಲ್ಲಿ ಕೂತು ಆಹಾರ ಸೇವಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಮಳೆ-ಬಿಸಿಲಿನಿಂದ ರಕ್ಷಣೆಗೆ ಜರ್ಮನ್ ಟೆಂಟ್ ಅಳವಡಿಸಲಾಗಿದೆ. 
 

First Published Jun 17, 2023, 12:59 PM IST | Last Updated Jun 17, 2023, 12:59 PM IST

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ವಿವಾಹವು ಜೂನ್ 5ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಶುಕ್ರವಾರ ಮಂಡ್ಯದಲ್ಲಿ ಬೀಗರ ಔತಣಕೂಟವನ್ನು ಏರ್ಪಡಿಸಲಾಗಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರ ಔತಣ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು 50 ಸಾವಿರ ಜನ ಬರುವ ನಿರೀಕ್ಷೆ ಇತ್ತು.ಅಂಬಿ ಅಭಿಮಾನಿಗಳು ಖುಷಿಯಿಂದ ಬಂದು ಹೊಟ್ಟೆ ತುಂಬ ಉಂಡು ಹೊಸ ಮದುವೆ ಹೆಣ್ಣು ಗಂಡಿಗೆ ಮನಸಾರೆ ಹಾರೈಸಿದ್ದಾರೆ.ಮಂಡ್ಯ ದ  ಗೆಜ್ಜಲಗೆರೆ ತಲುಪುತ್ತಿದ್ದಂತೆ ಅಭಿಮಾನಿಗಳು ನೂಕು ನುಗ್ಗಲಿನಲ್ಲಿ ಅಭಿ ಹತ್ತಿರ ಸುಳಿದರು. ಅಭಿಮಾನಿಗಳ ಹಾರೈಕೆ ಸ್ವೀಕರಿಸುತ್ತಾ ಒಳಗೆ ನಡೆದರು ಅಭಿಷೇಕ್.ಅವಿವಾ ಇಷ್ಟೊಂದು ಜನರನ್ನ ನೋಡಿ ಬೆಚ್ಚಿಬಿದ್ದಿದ್ದರು. ಇನ್ನು ಅವಿವಾ ಮುದ್ದೆ ತಿನ್ನೋದು ಅನುಮಾನ ಬಿರಿಯಾನಿ ತಿಂತಾರೆ ಎಂದಿದ್ದಾರೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅಭಿಷೆಕ್ ಅಂಬರಿಷ್ ಹೇಳಿದರು.

ಇದನ್ನೂ ವೀಕ್ಷಿಸಿ: ಸರ್ಕಾರ ನಮ್ಮ ರಕ್ಷಣೆಗೆ ಬರುವುದಿಲ್ಲ,ನಾವೇ ನಮ್ಮ ರಕ್ಷಣೆ ಮಾಡಿಕೊಳ್ಳಬೇಕು: ಸಿ.ಟಿ. ರವಿ