ಮತ್ತೊಂದು ಪ್ಯಾನ್ ಇಂಡಿಯಾ ಹಬ್ಬಕ್ಕೆ ಸ್ಯಾಂಡಲ್‌ವುಡ್ ಸಜ್ಜು; ಕಬ್ಜ ಟೀಸರ್ ರಿಲೀಸ್ ಪ್ಲಾನ್ ಹೇಗಿದೆ?

ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಸ್ಯಾಂಡಲ್ವುಡ್ ಸಿನಿಮಾಗಳದ್ದೇ ದರ್ಬಾರ್. ಈಗ ಮತ್ತೊಂದು ಸಿನಿಮಾ ಭಾರತೀಯ ಸಿನಿಮಾ ರಂಗದ ಬಾಕ್ಸಾಫೀಸ್ ಕಬ್ಜ ಮಾಡಲು ಸಜ್ಜಾಗಿದೆ.

First Published Aug 20, 2022, 5:16 PM IST | Last Updated Aug 20, 2022, 5:16 PM IST

ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಸ್ಯಾಂಡಲ್ವುಡ್ ಸಿನಿಮಾಗಳದ್ದೇ ದರ್ಬಾರ್... ಕೆಜಿಎಫ್, ಕೆಜಿಎಫ್2, ವಿಕ್ರಾಂತ್ ರೋಣ, 777 ಚಾರ್ಲಿ, ಜೇಮ್ಸ್ ಸಿನಿಮಾಗಳು ನೂರಾರು ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಬರೆದಿರೋದು ಇನ್ನೂ ಹಸಿ ಹಸಿಯಾಗೆ ಇದೆ. ಈಗ ಮತ್ತೊಂದು ಸಿನಿಮಾ ಭಾರತೀಯ ಸಿನಿಮಾ ರಂಗದ ಬಾಕ್ಸಾಫೀಸ್ ಕಬ್ಜ ಮಾಡಲು ಸಜ್ಜಾಗಿದೆ. ಆ ಸಿನಿಮಾವೇ. ಹೌದು, ಪ್ಯಾನ್ ಇಂಡಿಯಾದಲ್ಲಿ ಇನ್ಮುಂದೆ ಕಬ್ಜ ಸಿನಿಮಾದ್ದೇ ದರ್ಬಾರ್.. ಇಷ್ಟು ದಿನ ಕಬ್ಜ ಸಿನಿಮಾದ ಫಸ್ಟ್ ಲುಕ್ ಬಿಟ್ರೆ ಮತ್ತಿನ್ನೇನು ಅಪ್ಡೇಟ್ ಸಿಕ್ಕಿರಲಿಲ್ಲ. ಭಟ್ ಓಗ ಕಬ್ಜ ಟೀಸರ್ ಬಿಡುಗಡೆಗೆ ಪ್ಲಾನ್ ಸಿದ್ಧವಾಗಿದೆ. ರಿಯಲ್ ಸ್ಟಾರ್ ಉಪ್ಪಿಗೆ ಸೆಪ್ಟೆಂಬರ್ 18ರಂದು ಹುಟ್ಟುಹಬ್ಬ. ಅದೇ ದಿನ ಕಬ್ಜ ಮೊದಲ ಟೀಸರ್ ಕೊಡಲು ನಿರ್ದೇಶಕ ಆರ್ ಚಂದ್ರು ಬ್ಲ್ಯೂ ಪ್ರಿಂಟ್ ರೆಡಿ ಮಾಡಿದ್ದಾರೆ. ಕಬ್ಜ ಸಿನಿಮಾದ ವೈಬ್ ಹೇಗಿದೆ ಗೊತ್ತಾ.? ಒಂದು ಥ್ರಿಬಲ್ ಆರ್, ಒಂದು ಕೆಜಿಎಪ್ ಸಿನಿಮಾ ಸೇರಿಸಿದ್ರೆ ಒಂದು ಕಬ್ಜ ಆಗುತ್ತೆ ಅನ್ನೋ ಟಾಕ್ ಇದೆ. ಯಾಕಂದ್ರೆ ಈ ಸಿನಿಮಾದ ಟೀಸರ್ ಬಂದಿಲ್ಲ. ಟ್ರೈಲರ್ ನೋಡಿಲ್ಲ. ಬರೀ ಫಸ್ ಲುಕ್ ಹಾಗು ಮೋಷನ್ ಪೋಸ್ಟರ್ನಿಂದಲೇ ಕಬ್ಜ ಸಿನಿಮಾದ ಮೇಲೆ ಇಡೀ ಭಾರತೀಯ ಸಿನಿ ರಸಿಕರ ಕಣ್ಣು ಬಿದ್ದಿದೆ. ಇದೀಗ ಕಬ್ಜ ಸಿನಿಮಾ ತನ್ನ ಪ್ರಮೋಷನ್ಅನ್ನ ಆರ್ಆರ್ಆರ್ ಹಾಗು ಕೆಜಿಎಫ್-2 ಸಿನಿಮಾಗಳ ಲೆವೆಲ್ಗಿಂತಲೂ ದೊಡ್ಡ ಮಟ್ಟದಲ್ಲಿ ಮಾಡೋ ಪ್ಲಾನ್ ಹಾಕಿಕೊಂಡಿದ್ದಾರೆ.