ನಾವು 140ಕ್ಕೂ ಹೆಚ್ಚು ಸೀಟ್‌ ಗೆದ್ದು, ಸರ್ಕಾರ ರಚಿಸುತ್ತೇವೆ: ಬಿಎಸ್‌ವೈ

ಇಂದಿನಿಂದ ಬಿಜೆಪಿ ಅಭ್ಯರ್ಥಿ ಪರ ಬಿಎಸ್‌ವೈ ಪ್ರಚಾರ
ಮೇ.8 ರ ತನಕ ಬಿ.ಎಸ್‌.ಯಡಿಯೂರಪ್ಪ ಪ್ರಚಾರ
ಬಿ.ಎಸ್‌. ಸಂತೋಷ್‌ ಭೇಟಿ ಬಳಿಕ ಬಿಎಸ್‌ವೈ ಹೇಳಿಕೆ

First Published Apr 25, 2023, 2:30 PM IST | Last Updated Apr 25, 2023, 2:30 PM IST

ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಎಲ್ಲಾ ಪಕ್ಷದ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಮೇ. 10 ರಂದು ಮತದಾನ ನಡೆಯಲಿದ್ದು, ಮೇ.13 ರಂದು ಫಲಿತಾಂಶ ಬರಲಿದೆ. ಈ ಹಿನ್ನೆಲೆ ಇಂದಿನಿಂದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪ್ರಚಾರ ಮಾಡಲಿದ್ದಾರೆ. ಇಂದಿನಿಂದ ಮೇ.8ರ ತನಕ ಬಿಎಸ್‌ವೈ ಪ್ರಚಾರ ಮಾಡಲಿದ್ದಾರೆ. ಬಿ.ಎಲ್‌. ಸಂತೋಷ್‌ ಭೇಟಿ ಬಳಿಕ ಈ ಬಗ್ಗೆ ಬಿಎಸ್‌ವೈ ಮಾಹಿತಿ ನೀಡಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ನಾವು ಸ್ವಂತ ಬಲದ ಮೇಲೆ ಗೆಲ್ಲುತ್ತೇವೆ. ಮೋದಿ, ಅಮಿತ್‌ ಶಾ ರಾಜ್ಯಕ್ಕೆ ಬಂದ ಮೇಲೆ ಬಿಜೆಪಿ ಪರ ಅಲೆ ಎದ್ದಿದೆ. ನಾವು 140ಕ್ಕೂ ಹೆಚ್ಚು ಸೀಟ್‌ ಗೆದ್ದು, ಸರ್ಕಾರ ರಚನೆ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಹುಬ್ಬಳ್ಳಿಯಲ್ಲಿ ಚುನಾವಣಾ ರಣತಂತ್ರ ಹೆಣೆದ ಶಾ: ಬೆಲ್ಲದ್‌ ಹೆಗಲಿಗೆ 15 ಲಿಂಗಾಯತ ಕ್ಷೇತ್ರಗಳ ಜವಾಬ್ದಾರಿ

Video Top Stories