Asianet Suvarna News Asianet Suvarna News

Legislative Council; ಕಣದಿಂದ ಹಿಂದೆ ಸರಿದ ಕಾರಣ ಬಿಚ್ಚಿಟ್ಟ ಸಹಕಾರಿ ದಿಗ್ಗಜ ರಾಜೇಂದ್ರ ಕುಮಾರ್

* ಕರ್ನಾಟಕ ವಿಧಾನ ಪರಿಷತ್ ಚುನಾವಣೆ
* ದಕ್ಷಿಣ ಕನ್ನಡ ಸ್ಪರ್ಧಾಕಣದಿಂದ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಹಿಂದೆ ಸರಿದ ವಿಚಾರ
* ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಡಾ.ಎಂ. ಎನ್. ರಾಜೇಂದ್ರ ಕುಮಾರ್  ಮಾತು
* ಹಿಂದೆ ಸರಿಯಲು ಕಾರಣ ತಿಳಿಸಿದ ಸಹಕಾರ ಧುರೀಣ 

ಮಂಗಳೂರು(ನ. 20)  ಕರಾವಳಿಯ(Dakshina Kannada) ಪರಿಷತ್ (Legislative Council)ಕಣದಿಂದ  ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ರಾಜೇಂದ್ರ ಕುಮಾರ್ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ನಿಂದ ಅವರಿಗೆ ಟಿಕೆಟ್ ದೊರೆಯುತ್ತದೆ ಎನ್ನುವ ಮಾತುಗಳು ಬಂದಿದ್ದವು. ಆದರೆ ಈಗ ಕಣದಿಂದ ಹಿಂದೆ ಸರಿದಿದ್ದಾರೆ.

ನಾನು ಪಕ್ಷೇತರನಾಗಿಯೇ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದ್ದು, ಆದ್ರೆ ಎಲ್ಲರೂ ಕಾಂಗ್ರೆಸ್ (Congress) ಸ್ಪರ್ಧೆಯ ಭಾವನೆ ವ್ಯಕ್ತಪಡಿಸಿದ್ರು. ಕಾಂಗ್ರೆಸ್ ನವರು ಕೂಡ ದೂರವಾಣಿ ಸಂಪರ್ಕ ಮಾಡಿ ಕಾಂಗ್ರೆಸ್ ನಿಂದ ನಿಲ್ಲಲು ಹೇಳಿದ್ದರು. ಆದರೆ ನಾನು ಅದಕ್ಕೆ ತಯಾರಿಲ್ಲ. ಪಕ್ಷಾತೀತವಾಗಿ ಸಹಕಾರಿ ಕ್ಷೇತ್ರದಲ್ಲಿ ಇರೋ ಕಾರಣ ಕೆಲಸ ಮಾಡಲು ಒಳ್ಳೆದಾಗುತ್ತದೆ ಎಂದಿದ್ದಾರೆ.

ಬಿಜೆಪಿ ಪರಿಷತ್ ಪಟ್ಟಿಯಲ್ಲಿ ಅಚ್ಚರಿ ಮುಖಗಳಿಗೆ ಅವಕಾಶ

ರಾಜಕೀಯ ಒತ್ತಡ ಸಹಜ, ಎರಡೂ ಪಕ್ಷದಿಂದಲೂ ಇತ್ತು. ನಾನು ನಿಂತಿದ್ದರೆ ಎರಡೂ ಪಕ್ಷದ ಮತ ವಿಭಜನೆ ಆಗ್ತಿತ್ತು. ನಾನು ಮತ್ತು ಸಹಕಾರಿ ಸಚಿವ ಬಹಳಷ್ಟು ಆತ್ಮೀಯರು. ರಾಜಕೀಯ ಕಾರಣಗಳು ಬೇರೆ. ಆದರೆ ರಾಜಕೀಯದ ವೇದಿಕೆಯಲ್ಲಿ ಮಾತಿಗೆ ವಿಷಯ ಬೇಕು. ಅವರ ಮಾತಿನಿಂದ ನನಗೆ ಎಫೆಕ್ಟ್ ಇಲ್ಲ, ಆ ಬಗ್ಗೆ ತಲೆ ಕೆಡಿಸಲ್ಲ. ನನ್ನ ಬೆಂಬಲಿಗರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.