ಒಬ್ಬರ ಶಪಥ, ಇನ್ನೊಬ್ಬರ ಋಣಸಂದಾಯ, ಏನಿದರ ಗುಟ್ಟು, ಕುತೂಹಲ ಕೆರಳಿಸಿದ್ದೇಕೆ ಶಿಂಧೆ ಆಡಿದ ಆ ಒಂದು ಮಾತು?
ಶಿಂಧೆ ಪ್ರಮಾಣವಚನ ಸ್ವೀಕರಿಸಿದ ಮೇಲೆ, ಕೇಸರಿ ಪಾಳಯ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ಅಷ್ಟಕ್ಕೂ ದೇವೇಂದ್ರ ಫಡ್ನವೀಸ್ ಅವರನ್ನೇ ಸಿಎಂ ಮಾಡೋಕೆ ಹೈಕಮಾಂಡ್ ಪಟ್ಟು ಹಿಡಿದಿದ್ದು ಯಾಕೆ? ನೂತನ ಸಿಎಂ ಮುಂದಿರೋ ಸವಾಲುಗಳೇನು?.
ಬೆಂಗಳೂರು(ಡಿ.06): ಅಂತೂ ಮುಗೀತು ದೇವೇಂದ್ರ ಫಡ್ನವೀಸ್ ಅವರ ಮಹಾ ಪಟ್ಟಾಭಿಷೇಕ. ಇದರಿಂದ ಕಂಟಕ ದೂರವಾಯ್ತು. ಆತಂಕ ಮರೆಯಾಯ್ತು. ಯಾಕಂದ್ರೆ, ಆ ಒಬ್ಬ ಸೇನಾಪತಿ ಮುನಿದರೆ. ಇಬ್ಬರು ಇಂದ್ರರಿಗೆ ಗ್ರಹಚಾರ ಕೆಡೋ ಪ್ರಮೇಯ ಇತ್ತು. ಒಬ್ಬರ ಶಪಥ. ಇನ್ನೊಬ್ಬರ ಋಣಸಂದಾಯ. ಈ ಮಾತುಗಳೇ ರಾಷ್ಟ್ರ ರಾಜಕಾರಣದ ಕುತೂಹಲ ಹೆಚ್ಚಿಸಿದೆ. ಅದೇಕೆ ಅನ್ನೋದರ ಕಂಪ್ಲೀಟ್ ರಿಪೋರ್ಟ್, ಇಲ್ಲಿದೆ ನೋಡಿ..
ಒಂದು ವೇಳೆ, ಏಕನಾಥ್ ಶಿಂಧೆ ಏನಾದ್ರೂ ಮುನಿಸಿಕೊಂಡಿದ್ದಿದ್ರೆ, ಇಷ್ಟು ಹೊತ್ತಿಗೆ ಮೈತ್ರಿಪಾಳಯದಲ್ಲಿ ಬಡಬಾಗ್ನಿ ಭುಗಿಲೆದ್ದು, ವಿಧ್ವಂಸವೇ ಸೃಷ್ಟಿಯಾಗ್ತಾ ಇತ್ತು.. ಅದರ ಪರಿಣಾಮ ಬರೀ ಮಹಾರಾಷ್ಟ್ರ ಮಾತ್ರವೇ ಅಲ್ಲ, ಡೈರೆಕ್ಟ್ ಆಗಿ ದೆಹಲಿ ಗದ್ದುಗೆ ಮೇಲೂ ಉಂಟಾಗ್ತಾ ಇತ್ತು.. ಅಸಲಿಗೆ, ಇಷ್ಟೆಲ್ಲಾ ಊಹಾಪೋಹಗಳು ಹುಟ್ಟಿಕೊಂಡಿದ್ದು ಯಾಕೆ? ಹೇಗೆ? ಇದನ್ನೆಲ್ಲಾ ಅದ್ಯಾವ ಅಸ್ತ್ರ ಪ್ರಯೋಗದ ಮೂಲಕ ನಿಭಾಯಿಸಿತ್ತು ಕಮಲಪಾಳಯ?.
ಮಹಾರಾಷ್ಟ್ರ ಸಿಎಂ ಆದ ಫಡ್ನವಿಸ್‌ಗೆ ಮೊದಲ ತಲೆನೋವು, ಮಹಾಯುತಿ ಸರ್ಕಾರದ ಮಂದೆ ಸವಾಲು!
ದೇಶವೇ ಕುತೂಹಲದ ಕಣ್ಣುಗಳಿಂದ ನೋಡ್ತಾ ಇದ್ದ ಮಹಾರಾಷ್ಟ್ರ ಸಿಎಂ ಗದ್ದುಗೆ ಪಟ್ಟಾಭಿಷೇಕ ಗ್ರಾಂಡ್ ಆಗೇ ಮುಗಿದಿದೆ..ಇಲ್ಲಿಂದ ಮುಂದೆ, ಬಿಜೆಪಿ ತನಗೆ ಎದುರಾಳಿಯ ಕಾಟವೇ ಇರೋದಿಲ್ಲ ಅಂತ ನಂಬಬಹುದು ಹಾಗಂತ ಕಂಟಕ ಮಾಯವಾಯ್ತಾ? ಇಲ್ಲಿದೆ ನೋಡಿ ಉತ್ತರ..
ಅಂತೂ ಶಿಂಧೆ ಪ್ರಮಾಣವಚನ ಸ್ವೀಕರಿಸಿದ ಮೇಲೆ, ಕೇಸರಿ ಪಾಳಯ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ಅಷ್ಟಕ್ಕೂ ದೇವೇಂದ್ರ ಫಡ್ನವೀಸ್ ಅವರನ್ನೇ ಸಿಎಂ ಮಾಡೋಕೆ ಹೈಕಮಾಂಡ್ ಪಟ್ಟು ಹಿಡಿದಿದ್ದು ಯಾಕೆ? ನೂತನ ಸಿಎಂ ಮುಂದಿರೋ ಸವಾಲುಗಳೇನು?. ಮಹಾರಾಷ್ಟ್ರದ ದೇವೇಂದ್ರನಿಗೆ ಮೂರನೇ ಸಲ ಪಟ್ಟ ಸಿಕ್ಕಿದೆ. ಈ ಅವಧಿ ಫಡ್ನವೀಸ್ ಪಾಲಿಗೆ ಅಕ್ಷರಶಃ ಅಗ್ನಿಪರೀಕ್ಷೆ.