ರಾಮನಿಗೆ ಭಾರಧ್ವಾಜರು ಮಾಂಸಹಾರ ವ್ಯವಸ್ಥೆ ಮಾಡ್ತಿನಿ ಎಂದಿದ್ದರು: ಉಗ್ರಪ್ಪ
Karnataka Politics: ಕೆಂಪಣ್ಣ ಮಾಡಿದ 40 ಪರ್ಸೆಂಟ್ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಉಗ್ರಪ್ಪ ಹೇಳಿದ್ದಾರೆ
ಬಳ್ಳಾರಿ (ಆ. 26): ಕೆಂಪಣ್ಣ ಮಾಡಿದ 40 ಪರ್ಸೆಂಟ್ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು. ನಿಷ್ಪಕ್ಷಪಾತ ತನಿಖೆಯಾದ್ರೇ ಬಹುತೇಕ ಸಚಿವರು ಜೈಲಿಗೆ ಹೋಗ್ತಾರೆ. ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ರೆ ನಮ್ಮಲ್ಲಿರುವ ದಾಖಲೆ ಕೊಡ್ತೇವೆ. ವ್ಯವಸ್ಥಿತ ಸಂಚು ರಾಜ್ಯದಲ್ಲಿ ನಡೆಯುತ್ತಿದೆ. ಇಂತಹ ವಿಚಾರಗಳ ಬಗ್ಗೆ ಮಾತಾಡಿದ್ರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರು ಅದು ಇದು ಅಂತಾ ದಾರಿ ತಪ್ಪಿಸ್ತಾರೆ. ಮಾಂಸ ತಿನ್ನಬಾರದು, ದೇವಸ್ಥಾನಕ್ಕೆ ಹೊಗಬಾರದು ಅಂತಾ ಎಲ್ಲಿ ಇದೆ? ಎಂದು ಬಳ್ಳಾರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.
ಬಿಜೆಪಿಯವರು ಅಧುನಿಕ ರಾಮ ಭಕ್ತರು. ಭಾರಧ್ವಜರ ಆಶ್ರಮಕ್ಕೆ ರಾಮ ಹೋದಾಗ ರಾಮನಿಗೆ ಭಾರಧ್ವಜರು ರಾಮನಿಗೆ ಮಾಂಸಹಾರ ವ್ಯವಸ್ಥೆ ಮಾಡ್ತಿನಿ ಎಂದಿದ್ದರು. ಸೀತಾ ಮಾತೆ ಗಂಗಾ ನದಿ ದಾಟ ಬೇಕಾದ್ರೆ ತಾಯಿ ನೀನು ಜಗನ್ಮಾತೆ, ರಕ್ಷಣೆ ಕೊಡು, ನಾನು ವಾಪಸ್ ಬಂದ ಮೇಲೆ ನಿನಗೆ ತೃಪ್ತಿಯಾಗೊ ವಷ್ಟು ಮಾಂಸದ ನೈವೇದ್ಯ, ಹೆಂಡದ ನೈವೇದ್ಯ ಕೊಡ್ತೇವೆ ಎಂದಿದ್ದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ತಾಕತ್ತಿದ್ದರೇ, ಧಮ್ ಇದ್ರೇ, ಮಾಂಸ ತಿನ್ನೋರು, ಮೊಟ್ಟೆ ತಿನ್ನೋರು, ಮೀನ್ ತಿನ್ನೋರು ಶಾಖೆಗೆ ಬರ್ಬಾದು ಎನ್ನಲಿ. ಮಾಂಸ ತಿನ್ನೋರು, ಮೊಟ್ಟೆ ತಿನ್ನೋರು, ಮೀನ್ ತಿನ್ನೋರ ಓಟ್ ಬೇಕಾಗಿಲ್ಲ ಅಂತಾ ಹೇಳಲಿ ಎಂದು ಉಗ್ರಪ್ಪ ಹೇಳಿದ್ದಾರೆ.