ನೋಟಾಗೆ ಮತ ಹಾಕಿ; ಅನರ್ಹರ ವಿರುದ್ಧ ಮುತಾಲಿಕ್ ಗರಂ!

  • ರಾಜ್ಯದಲ್ಲಿ ಅಸಹ್ಯ ರಾಜಕಾರಣ,  ಎಲ್ಲಾ ಪಕ್ಷಗಳಲ್ಲೂ ನಿರ್ಲಜ್ಜರು, ಲೂಟಿಕೋರರು
  • ನೋಟಾ ಚಲಾಯಿಸುವ ಮೂಲಕ ರಾಜಕಾರಣಿಗಳಿಗೆ ಬುದ್ಧಿ ಕಲಿಸಿ
  • ಗುರುವಾರ (ಡಿ. 05) 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ 
First Published Dec 3, 2019, 4:19 PM IST | Last Updated Dec 3, 2019, 4:19 PM IST

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳು ಉಪಚುನಾವಣೆಗೆ ಸಿದ್ಧವಾಗಿದೆ. ಡಿ.05ಕ್ಕೆ ಮತದಾನ ನಡೆಯಲಿದೆ.  ಚಿಕ್ಕಮಗಳೂರಿನಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜಕಾರಣಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಅಸಹ್ಯ ರಾಜಕಾರಣ ನಡೆಯುತ್ತಿದೆ.  ಎಲ್ಲಾ ಪಕ್ಷಗಳಲ್ಲೂ ನಿರ್ಲಜ್ಜರು, ಲೂಟಿಕೋರರು ತುಂಬಿಕೊಂಡಿದ್ದಾರೆ. ಯಾರು, ಯಾವಾಗ, ಯಾವ ಪಕ್ಷದಲ್ಲಿ ಇರ್ತಾರೆ ಎಂದು ಹೇಳೋದಿಕ್ಕೆ ಆಗಲ್ಲ, ಜನ ನೋಟಾ ಚಲಾವಣೆ ಮಾಡಿ  ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.

ಡಿ.09ಕ್ಕೆ ಉಪಚುನಾವಣೆಯ ಫಲಿತಾಂಶಗಳು ಪ್ರಕಟವಾಗಲಿವೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

Video Top Stories