Asianet Suvarna News Asianet Suvarna News

ಬೈ ಎಲೆಕ್ಷನ್ ಟಿಕೆಟ್ ಕುಸ್ತಿ: ಕಾಂಗ್ರೆಸ್ ಸೇರಲಿರವ ಕಾಗೆ ಕಾಯಲು ಕತ್ತಿ

Nov 13, 2019, 7:25 PM IST

ಬೆಂಗಳೂರು, [ನ.13]: ಅನರ್ಹ ಶಾಸಕರ ಹಣೆ ಬರಹ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿದೆ. 17 ಜನ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್‌ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. 

ರಾಜು ಕಾಗೆ, ಪೂಜಾರಿ ಬಳಿ ಮಾತಾಡುವೆ: ಯಡಿಯೂರಪ್ಪ

ಇದರ ಜೊತೆ ಅನರ್ಹರ ಕ್ಷೇತ್ರದಲ್ಲಿ ಬಂಡಾಯದ ಬಗ್ಗೆ ಸಿಎಂಗೆ ಟೆನ್ಷನ್ ಶುರುವಾಗಿದೆ.  ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆ ಈಗಾಗಲೇ ಬಂಡಾಯ ಎದ್ದಿದ್ದು, ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಹೇಗಾದರೂ ಮಾಡಿ ಕಾಗೆಯನ್ನು ಸಮಾಧಾನ ಮಾಡಲು ಮಂತ್ರಿಪಟ್ಟ ಸಿಕ್ಕಲ್ಲವೆಂದು ಅಸಮಾಧಾನಗೊಂಡಿದ್ದ ನಾಯಕನಿಗೆ ಬಿಎಸ್ ವೈ ಜವಾಬ್ದಾರಿ ನೀಡಿದ್ದಾರೆ. ಯಾರು ಆ ಅಸಮಾಧಾನಿತ ನಾಯಕ..? ವಿಡಿಯೋನಲ್ಲಿ ನೋಡಿ