ನಿಮ್ಮ ಮೇಲಿರುವ ಪ್ರಕರಣಗಳನ್ನು ವಜಾ ಮಾಡುತ್ತೇವೆ ಎಂದಿದ್ದಕ್ಕೆ ಬಿಜೆಪಿಗೆ ಬಂದ್ರಾ? ಜನಾರ್ಧನ ರೆಡ್ಡಿ ಹೇಳಿದ್ದೇನು?

ಪ್ರಕರಣಗಳಿಗೆ ಹೆದರುವ ಜಾಯಮಾನ ನನ್ನದಾಗಿದ್ರೆ ನನ್ನ ಮೇಲೆ ಕೇಸ್‌ ಆಗಿದ್ದವರ ಜೊತೆಗೇನೇ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೆ. ಹೊಂದಾಣಿಕೆ ರಾಜಕಾರಣ ಗೊತ್ತಿಲ್ಲದೇ ಇರೋದರಿಂದಲೇ ನನಗೆ ಈ ಸಮಸ್ಯೆಗಳು ಎಂದು ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.

First Published Apr 7, 2024, 5:52 PM IST | Last Updated Apr 7, 2024, 5:53 PM IST

ನಾನು ಯಾವತ್ತಿಗೂ ಸಹ ಯಾವುದೇ ಪಕ್ಷದ ವಿರುದ್ಧ ತೊಡೆ ತಟ್ಟಿಲ್ಲ. ಬಿಜೆಪಿ(BJP) ಪಕ್ಷಕ್ಕೆ ಸೇರ್ಪಡೆ ಆಗಿ ಕೆಲಸ ಮಾಡಬೇಕು ಎಂದು ಗೃಹ ಸಚಿವ ಅಮಿತ್‌ ಶಾ(Amit Shah) ಹೇಳಿದರು. ಅದರಂತೆ ನಾನು ಈಗ ಬಿಜೆಪಿ ಪಕ್ಷ ಸೇರಿದ್ದೇನೆ ಎಂದು ಶಾಸಕ ಜನಾರ್ಧನ ರೆಡ್ಡಿ (Janardhana Reddy) ತಿಳಿಸಿದ್ದಾರೆ. ಅಲ್ಲದೆ ಹಣದಿಂದಲೇ ರಾಜಕೀಯ ಮಾಡಬಹುದು ಎಂದುಕೊಂಡರೆ ಅದು ಸುಳ್ಳು. ಯಾಕೆಂದರೆ ಟಾಟಾ ಬಿರ್ಲಾ ಅವರಂತವರೇ ರಾಜಕೀಯಕ್ಕೆ ಬಂದು ವಿಫಲರಾಗಿ ಹಿಂದೆ ಸರಿದಿದ್ದಾರೆ. ಜನರ ಪ್ರೀತಿ, ವಿಶ್ವಾಸ, ನಂಬಿಕೆ ಇಲ್ಲದೆ ಎಷ್ಟೇ ಹಣ ಇದ್ದರೂ ಸಹ ರಾಜಕೀಯದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ತಾನೊಂದು ಬಯಸಿದರೆ ದೈವವೊಂದು ಬಯಸಿದಂತೆ ಎಂದು ನನಗೆ ಇಷ್ಟ ಇಲ್ಲದೆ ಇದ್ದರೂ ಸಹ ರಾಜಕೀಯಕ್ಕೆ ಬಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Video Top Stories