ಎರಡು ದಿನ ಸಿಎಂಗಿಲ್ಲ ಟೆನ್ಶನ್, ಮುಡಾ ಕೇಸ್ ವಿಚಾರಣೆ ಆ.31ಕ್ಕೆ ಶಿಫ್ಟ್!
ಮಡಾ ಹಗರಣದಲ್ಲಿ ಮತ್ತೆರಡು ದಿನ ಸಿಎಂಗೆ ನಿರಾಳತೆ ಸಿಕ್ಕಿದೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಹೈವೋಲ್ಟೇಜ್ ವಾದ- ಪ್ರತಿವಾದ ಆಗಿದೆ. ಜಡ್ಜ್ ಶನಿವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿದ್ದಾರೆ.
ಬೆಂಗಳೂರು (ಆ.29): ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರುದ್ಧ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿ ಮುಂದೂಡಿಕೆಯಾಗಿದೆ. ಶನಿವಾರ ಇದರ ವಿಚಾರಣೆ ನಡೆಯಲಿದೆ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ತಿಳಿಸಿದೆ.
ಸಿಎಂ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಆಲಿಸಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಶನಿವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಾಡಲಿದ್ದು, ಅಲ್ಲಿಯವರೆಗೂ ಮಧ್ಯಂತರ ತಡೆ ಮುಂದೂಡಿಕೆಯಾಗಲಿದೆ. ಸಿದ್ದರಾಮಯ್ಯ ವಿರುದ್ಧ ಯಾವುದೇ ನಿರ್ಣಯ ಮಾಡುವಂತಿಲ್ಲ. ವಿಚಾರಣಾ ನ್ಯಾಯಾಲಯಗಳು ಆದೇಶ ನೀಡದಂತೆ ಹೈಕೋರ್ಟ್‌ನ ತಡೆ ಮುಂದುವರಿಯಲಿದೆ.
ರಾಜ್ಯಪಾಲರ ಅನುಮತಿ ವಿವೇಚನಾ ರಹಿತ. ಅನುಮತಿ ಕೇಳದ ದೂರುಗಳಿಗೂ ರಾಜ್ಯಪಾಲರಿಂದ ಅನುಮತಿ ಸಿಕ್ಕಿದೆ. ಕ್ಯಾಬಿನೆಟ್ ಸಲಹೆಯನ್ನು ರಾಜ್ಯಪಾಲರು ಪಾಲನೆ ಮಾಡಿಲ್ಲ. ಎರಡು ದೂರುಗಳಿಗೆ ರಾಜ್ಯಪಾಲರು ನೋಟಿಸ್ ಕೊಟ್ಟಿಲ್ಲ ಎಂದು ಸಿಂಘ್ವಿ ವಾದ ಮಂಡಿಸಿದ್ದಾರೆ.