Muda Scam: ಸಿಎಂ ಸಿದ್ರಾಮಯ್ಯಗೆ ಪ್ರಾಸಿಕ್ಯೂಷನ್ ಟೆನ್ಷನ್!

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಪ್ರಾಸಿಕ್ಯೂಷನ್‌ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಸಿಎಂ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ಶನಿವಾರ ನಡೆಯಲಿದೆ.

First Published Aug 30, 2024, 11:38 PM IST | Last Updated Aug 30, 2024, 11:38 PM IST

ಬೆಂಗಳೂರು (ಆ.30): ಸಿದ್ದರಾಮಯ್ಯಗೆ ನಿಲ್ಲದ ಪ್ರಾಸಿಕ್ಯೂಷನ್ ಟೆನ್ಷನ್​. ನಾಳೆ ಮತ್ತೆ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ. ಜನಾಶೀರ್ವಾದ ಇದೆ.. ನನ್ನ ನಾಶ ಮಾಡಲಾಗಲ್ಲ ಎಂದು ಸಿಎಂ ಗುಡುಗಿದ್ದಾರೆ.

ಸಿಎಂ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಾಡಿದ್ದರು. ಶನಿವಾರ ರಾಜ್ಯಪಾಲರ ಪರ ವಕೀಲ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಪ್ರತಿವಾದ ಮಂಡನೆ ಮಾಡಲಿದ್ದಾರೆ. ಅವರೊಂದಿಗೆ ಅರ್ಜಿದಾರರ ಪರ ವಕೀಲರು ಕೂಡ ವಾದ ಮಂಡಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ನಾಳೆ ರಾಜಭವನ ಚಲೋಗೆ ಕಾಂಗ್ರೆಸ್‌ ಕರೆ

ಈಗಾಗಲೇ ಕೇಸ್‌ನಲ್ಲಿ ಬಿಸಿ ಅನುಭವಿಸಿರುವ ಸಿಎಂ ಸಿದ್ಧರಾಮಯ್ಯ, ಹೋದಲ್ಲಿ ಬಂದಲ್ಲಿ ಇದೇ ವಿಚಾರವಾಗಿ ಮಾತನಾಡುತ್ತಿದ್ದಾರೆ. ಹಾವೇರಿಯಲ್ಲಿ ಶುಕ್ರವಾರ ಮಾತನಾಡುವಾಗಲೂ ತಮ್ಮ ವಿರುದ್ಧದ ಪಿತೂರಿಯ ಬಗ್ಗೆ ಭಾಷಣದಲ್ಲಿ ಮಾತನಾಡಿದ್ದಾರೆ.

Video Top Stories