ಸಚಿವ ಸ್ಥಾನದಿಂದ ವಿಶ್ವನಾಥ್ ಅನರ್ಹ; ಇದು ದೇವರು ಕೊಟ್ಟ ಶಿಕ್ಷೆ ಎಂದು ಸಾರಾ ಮಹೇಶ್ ಟಾಂಗ್.!
ಸಚಿವ ಸ್ಥಾನದಿಂದ ಅನರ್ಹರಾದ ವಿಶ್ವನಾಥ್‌ಗೆ, ಇದು ದೇವರು ಕೊಟ್ಟ ಶಿಕ್ಷೆ ಎಂದು ಸಾರಾ ಮಹೇಶ್ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಡಿ. 01): ಸಚಿವ ಸ್ಥಾನದಿಂದ ಅನರ್ಹರಾದ ವಿಶ್ವನಾಥ್‌ಗೆ, ಇದು ದೇವರು ಕೊಟ್ಟ ಶಿಕ್ಷೆ ಎಂದು ಸಾರಾ ಮಹೇಶ್ ಟಾಂಗ್ ನೀಡಿದ್ದಾರೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ನಿರಾಸೆ : ಸುಪ್ರೀಂಗೆ ಹೋಗ್ತಾರಾ ವಿಶ್ವನಾಥ್?
ಕಳೆದ ವರ್ಷ ಚಾಮುಂಡಿ ಸನ್ನಿಧಿಯಲ್ಲಿ ಸಾರಾ ಮಹೇಶ್- ವಿಶ್ವನಾಥ್ ಆಣೆ, ಪ್ರಮಾಣ ಹೈಡ್ರಾಮ ನಡೆಸಿದ್ದರು. ಹಣ ಪಡೆದು ವಿಶ್ವನಾಥ್ ಬಿಜೆಪಿಗೆ ಹೋಗಿದ್ದಾರೆ ಎಂದು ಸಾರಾ ಮಹೇಶ್ ಆರೋಪಿಸಿದ್ದರು. ಇದನ್ನು ಸಾಬೀತು ಪಡಿಸಲಿ ಎಂದು ವಿಶ್ವನಾಥ್ ಸವಾಲು ಹಾಕಿದ್ದರು. ತದನಂತರ ಸಾಕಷ್ಟು ಹೈಡ್ರಾಮಾ ನಡೆದಿತ್ತು.