Asianet Suvarna News Asianet Suvarna News

'ಸಿದ್ದರಾಮಯ್ಯನೇ ತಾಲಿಬಾನ್ ಸಂಸ್ಕೃತಿ ನಾಯಕ'

ಬಿಜೆಪಿಯವರೇ ತಾಲಿಬಾನಿ ಮನಸ್ಥಿತಿಯವರು ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, (ಸೆ.28): ಬಿಜೆಪಿಯವರೇ ತಾಲಿಬಾನಿ ಮನಸ್ಥಿತಿಯವರು ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

'RSSನವರನ್ನು ಚಡ್ಡಿಗಳು ಅಂತಾರೆ: ಆ ಚಡ್ಡಿನೇ ಮೊನ್ನೇ ಸಿದ್ದರಾಮಯ್ಯನ ಮಾನ ಕಾಪಾಡಿದ್ದು'

ಸಿದ್ದರಾಮಯ್ಯ ತಾಲಿಬಾನ್ ಸಂಸ್ಕ್ರತಿ ನಾಯಕ. ಅವರ ಅಧಿಕಾರಾವಧಿಯಲ್ಲಿ 18 ಹಿಂದೂ ಕಾರ್ಯಕರ್ತರ ಕೊಲೆಯಾಗಿತ್ತು. ಅನೇಕ ಹಿಂದೂಗಳನ್ನು ಕೊಲೆ ಮಾಡಿದ್ದ ಟಿಪ್ಪು ಜಯಂತಿ ಆಚರಣೆ ಮಾಡಿದರು. ಇದು ತಾಲಿಬಾನ್ ನ ನಿಜವಾದ ಮನಸ್ಥಿತಿ ಎಂದು ರವಿ ಕುಮಾರ್ ಸಿದ್ದರಾಂಯ್ಯಗೆ ತಿರುಗೇಟು ನೀಡಿದರು.