Asianet Suvarna News Asianet Suvarna News

ಸಿಎಂ ಯಡಿಯೂರಪ್ಪಗೆ ಲಿಂಗಾಯತ ನಾಯಕರೇ ರೆಬೆಲ್ಸ್!

ಕೊರೋನಾ ವೈರಸ್ ಸಂಕ್ರಾಮಿಕ ರೋಗದ ಭೀತಿಯ ಮಧ್ಯೆಯೇ ರಾಜ್ಯ ರಾಜಕೀಯದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿ ಮುಖಂಡರ ಅತೃಪ್ತಿ ಭುಗಿಲೆದ್ದಿದ್ದು, ಉತ್ತರ ಕರ್ನಾಟಕದ ಲಿಂಗಾಯತ ಮುಖಂಡರಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಸಭೆ ನಡೆಸಿದ್ದಾರೆ.

First Published May 29, 2020, 8:50 AM IST | Last Updated May 29, 2020, 10:13 AM IST

ಕೊರೋನಾ ವೈರಸ್ ಸಂಕ್ರಾಮಿಕ ರೋಗದ ಭೀತಿಯ ಮಧ್ಯೆಯೇ ರಾಜ್ಯ ರಾಜಕೀಯದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿ ಮುಖಂಡರ ಅತೃಪ್ತಿ ಭುಗಿಲೆದ್ದಿದ್ದು, ಉತ್ತರ ಕರ್ನಾಟಕದ ಲಿಂಗಾಯತ ಮುಖಂಡರಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಸಭೆ ನಡೆಸಿದ್ದಾರೆ.ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡಬೇಕು, ಉಮೇಶ್ ಕತ್ತಿಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೊಡಬೇಕು, ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಬದಲಾಯಿಸಬೇಕೆಂದು ದಿಢೀರ್ ನಡೆಸಿದ ಸಭೆಯಲ್ಲಿ ಮುಖಂಡರು ಬೇಡಿಕೆಗಳನ್ನು ಇಡಲು ನಿರ್ಧರಿಸಿದ್ದಾರೆ. ಆ ಮೂಲಕ ರಾಜ್ಯ ರಾಜಕೀಯದ ಚಟುವಟಿಕೆಗಳು ಮತ್ತೆ ಗರಿಗೆದರಿಕೊಂಡಿದೆ. ಅಷ್ಟಕ್ಕೂ ಏನೇನು ಆಗಿದೆ. 

"

Video Top Stories