Asianet Suvarna News Asianet Suvarna News

ಸಿಎಂ ಪ್ರವಾಸದಿಂದ ದೂರ ಉಳಿದ ಜಾರಕಿಹೊಳಿ ಟೀಮ್..!

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಬೆಳಗಾವಿ ಪ್ರವಾಸದಿಂದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಟೀಮ್‌ ಅಂತರ ಕಾಯ್ದುಕೊಳ್ಳುವ ಮೂಲಕ ಸಂಪುಟ ವಿಸ್ತರಣೆ ವಿಳಂಬಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದೆ.

ಬೆಂಗಳೂರು, [ಜ.29]: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಬೆಳಗಾವಿ ಪ್ರವಾಸದಿಂದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಟೀಮ್‌ ಅಂತರ ಕಾಯ್ದುಕೊಳ್ಳುವ ಮೂಲಕ ಸಂಪುಟ ವಿಸ್ತರಣೆ ವಿಳಂಬಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದೆ.

ಸಂಪುಟ ವಿಸ್ತರಣೆ: ಸಂಭಾವ್ಯ ಪಟ್ಟಿ ರೆಡಿ, ಬಿಎಸ್‌ವೈ ಲೀಸ್ಟ್‌ನಲ್ಲಿ ಯಾರೆಗೆಲ್ಲ ಸ್ಥಾನ.?

ಸಿಎಂ ಅವರು ಇಂದು [ಬುಧವಾರ] ಬೆಳಗಾವಿ ಜಿಲ್ಲೆಯಲ್ಲಿಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾಕಷ್ಟು ಮುಂಚೆಯೇ ಈ ಪ್ರವಾಸ ನಿಗದಿಯಾಗಿತ್ತು. ಈ ನಡುವೆಯೂ ಜಿಲ್ಲೆಯ ಪ್ರಭಾವಿ ರಾಜಕಾರಣಿ ಹಾಗೂ ಅರ್ಹ ಶಾಸಕ ರಮೇಶ್‌ ಜಾರಕಿಹೊಳಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿಎಂಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Video Top Stories