Asianet Suvarna News Asianet Suvarna News

ರಾಜ್ಯಸಭೆ ರಣತಂತ್ರ: ಜೆಡಿಎಸ್ ಬಂಡಾಯ ಮತ ಸೆಳೆಯಲು ಬಿಜೆಪಿಯಿಂದ 3ನೇ ಅಭ್ಯರ್ಥಿ ಕಣಕ್ಕೆ?

ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಎರಡು ಸ್ಥಾನ ಮತ್ತು ಕಾಂಗ್ರೆಸ್ಸಿಗೆ ಒಂದು ಸ್ಥಾನ ನಿರಾಯಾಸವಾಗಿ ಲಭಿಸುತ್ತವೆ. ಆದರೆ, ನಾಲ್ಕನೇ ಸ್ಥಾನವನ್ನು ಯಾವುದೇ ಒಂದು ಪಕ್ಷ ತನ್ನ ಸ್ವಂತ ಬಲದ ಮೇಲೆ ಗೆಲ್ಲಲು ಸಾಧ್ಯವಿಲ್ಲ.

ಬೆಂಗಳೂರು (ಮೇ. 30): ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನಾಗಿ ಹಾಲಿ ಸದಸ್ಯರೂ ಆಗಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಮತ್ತು ಚಿತ್ರನಟರೂ ಆಗಿರುವ ಪಕ್ಷದ ಮುಖಂಡ ಜಗ್ಗೇಶ್‌ (Jaggesh) ಅವರನ್ನು ಆಯ್ಕೆ ಮಾಡಲಾಗಿದೆ. ಈ ಎರಡರ ಪೈಕಿ ಜಗ್ಗೇಶ್‌ ಆಯ್ಕೆ ಎಲ್ಲರ ಅಚ್ಚರಿಗೆ ಮೂಡಿಸಿದೆ. 3 ನೇ ಅಭ್ಯರ್ಥಿಯನ್ನೂ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ. 3 ನೇ ಅಭ್ಯರ್ಥಿ ಯಾರಾಗ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಶೀಘ್ರವೇ ಅಂತಿಮ ನಿರ್ಧಾರ ಹೊರಬೀಳಲಿದೆ. 

News Hour Special: ಯಾವ ಪಕ್ಷದ ಸರ್ಕಾರವಿದ್ದರೂ ರೇವಣ್ಣ ಫೈಲ್ ಕ್ಲಿಯರ್ ಆಗೋದ್ಹೇಗೆ.?