Asianet Suvarna News Asianet Suvarna News

'ಪಾಂಚಜನ್ಯ'ದ ಹಿಂದಿದ್ದ ಶಿಷ್ಯನೇ ಕೃಷ್ಣ ಬೀಗನಾಗಿದ್ದು ಹೇಗೆ?

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮತ್ರ್ಯ ಹೆಗ್ಡೆ ಮದುವೆ ನಿಶ್ಚಯವಾಗಿ ಸೋಮವಾರ ಪರಸ್ಪರ ಹಾರ ಬದಲಿಸಿಕೊಂಡಿದ್ದಾರೆ.
 

ಬೆಂಗಳೂರು (ಜೂ. 16): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮತ್ರ್ಯ ಹೆಗ್ಡೆ ಮದುವೆ ನಿಶ್ಚಯವಾಗಿ ಸೋಮವಾರ ಪರಸ್ಪರ ಹಾರ ಬದಲಿಸಿಕೊಂಡಿದ್ದಾರೆ.

ಈ ಮೂಲಕ ಡಿ.ಕೆ. ಶಿವಕುಮಾರ್‌ ಅವರು ತಮ್ಮ ರಾಜಕೀಯ ಗುರು ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕುಟುಂಬದ ಜೊತೆ ಸಂಬಂಧ ಬೆಳೆಸಿದ್ದಾರೆ. ಆಷಾಢ ಮಾಸ ಮುಗಿದ ಬಳಿಕ, ಬಹುತೇಕ ಆಗಸ್ಟ್‌ ಮೊದಲ ವಾರದಲ್ಲಿ ಅಧಿಕೃತವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಲಿದೆ ಎಂದು ಡಿ.ಕೆ. ಶಿವಕುಮಾರ್‌ ಕುಟುಂಬದ ಮೂಲಗಳು ತಿಳಿಸಿವೆ.

ಡಿಕೆಶಿ ಪುತ್ರಿ ಮದುವೆ ಯಾವಾಗ, ಡೇಟ್ ಫಿಕ್ಸ್ ಆಯ್ತಾ?

ಎಸ್‌ ಎಂ ಕೃಷ್ಣ ಹಾಗೂ ಡಿಕೆಶಿ ರಾಜ್ಯ ರಾಜಕಾರಣದಲ್ಲಿ ಗುರ- ಶಿಷ್ಯರು ಎಂದೇ ಫೇಮಸ್ ಆದವರು. 1999 ರ ವಿಧಾನಸಭಾ ಚುನಾವಣೆಗೂ ಮುನ್ನ ಎಸ್ ಎಂ ಕೃಷ್ಣ 'ಪಾಂಚಜನ್ಯ ಯಾತ್ರೆ' ಮಾಡುತ್ತಾರೆ. ರಾಜ್ಯದ ಮೂಲೆ ಮೂಲೆ ಸುತ್ತಾಡಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ಕೃಷ್ಣ ಪಾಂಚಜನ್ಯದ ಹಿಂದಿರುವ ಶಕ್ತಿಯೇ ಡಿಕೆ ಶಿವಕುಮಾರ್. ಇಲ್ಲಿಂದ ಡಿಕೆಶಿ ಮೇಲೆ ಕೃಷ್ಣಾರಿಗೆ ನಂಬಿಕೆ, ಅಭಿಮಾನ ಹೆಚ್ಚಾಗುತ್ತಾ ಹೋಗುತ್ತದೆ. ಇದೀಗ ಬೀಗತನದವರೆಗೂ ಬಂದು ನಿಂತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

Video Top Stories