ನೆಟ್ಟಾರು ‘ಪ್ರವೀಣ್’ ಗೃಹಪ್ರವೇಶ.. ತಣ್ಣಗಾಗಿಸುತ್ತಾ ಕಾರ್ಯಕರ್ತರ ಆಕ್ರೋಶ..
ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಯಿಂದ ಮತ್ತೊಂದು ಹೊಸ ಅಸ್ತ್ರ ಪ್ರಯೋಗವಾಗಿದೆ.ದುಷ್ಕರ್ಮಿಗಳ ದಾಳಿಗೆ ಸಾವಿಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿಯಿಂದ ನಿರ್ಮಿಸಿಕೊಟ್ಟಿದ್ದ ಮನೆಯ ಗೃಹ ಪ್ರವೇಶ ನಡೆಯಿತು.ಇದು ಬಿಜೆಪಿ ಬ್ರಹ್ಮಾಸ್ತ್ರವೋ.. ಅಭಯವೋ..? ಸಂದೇಶವೋ..!
ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಯಿಂದ ಮತ್ತೊಂದು ಹೊಸ ಅಸ್ತ್ರ ಪ್ರಯೋಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು, ದುಷ್ಕರ್ಮಿಗಳ ದಾಳಿಗೆ ಕಳೆದ ವರ್ಷ ಜುಲೈ 26ರಂದು ಬಲಿಯಾಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮುಜುಗರಕ್ಕರ ಒಳಗಾಗಿತ್ತು. ಎಲೆಕ್ಷನ್ ಟೈಮಲ್ಲೇ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶ ಮಾಡಲಾಯಿತು. ಚುನಾವಣೆ ಹೊತ್ತಲ್ಲಿ ಇದು ಬಿಜೆಪಿಗೆ ಪ್ಲಸ್ ಆಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.ರಾಜ್ಯ ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣವಾಗಿದೆ. ಇನ್ನು 2022ರ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಪ್ರವೀಣ್ ಹತ್ಯೆ ಬಳಿಕ ಬಿಜೆಪಿ ನಾಯಕರು ತೀವ್ರ ಮುಜುಗರಕ್ಕೆ ಈಡಾಗಿದ್ದರು. ಹತ್ಯೆ ವೇಳೆ ಡ್ಯಾಮೇಜ್ ಆದ್ರೂ ಕುಟುಂಬದ ಪರ ನಿಂತು ಬಿಜೆಪಿ ಡ್ಯಾಮೇಜ್ ಸರಿಪಡಿಸಿಕೊಂಡಿದೆ.