ದಂಡೆತ್ತಿ ಬಂದ ಟಿಪ್ಪುಗೆ ಹೆದರಿಲ್ಲ ಕೊಡಗಿನ ಜನ, ಸಿದ್ದು ಸುಲ್ತಾನ್‌ಗೆ ಭಯಪಡ್ತಾರಾ? ಪ್ರತಾಪ್ ತಿರುಗೇಟು!
2017ರಲ್ಲಿ ದಸರಾ ಉದ್ಘಾಟನೆಗೆ ಮೈಸೂರಿಗೆ ಬಂದ ಸಿದ್ದರಾಮಯ್ಯ, ಕೋಟೆ ಆಂಜನೇಯಗೆ ಪೂಜೆ ಮಾಡಿ, ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಈ ಮಾತನ್ನು ಅಂದಿನ ಮೇಯರ್ ಕೂಡ ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಹೇಳಿಕೆ, ಬಿಜೆಪಿ ಕಾಂಗ್ರೆಸ್ ವಾಕ್ಸಮರ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕೊಡಗಿನ ಜನ ಹಲವು ಬಾರಿ ದಂಡೆತ್ತಿ ಬಂದ ಟಿಪ್ಪುಗೆ ಹೆದರಿಲ್ಲ. ಇನ್ನು ಸಿದ್ದು ಸುಲ್ತಾನಾಗೆ ಹೆದರಲ್ಲ. ಯಾರನ್ನೂ ಬೇಕಾದರೂ ಕರೆದುಕೊಂಡು ಬನ್ನಿ ಎಂದು ಸಂಸದ ಪ್ರತಾಪ್ ಸಿಂಹ್, ಸಿದ್ದರಾಮಯ್ಯನವರ ಮಡಿಕೇರಿ ಚಲೋ ಯಾತ್ರೆಗೆ ತಿರುಗೇಟು ನೀಡಿದ್ದಾರೆ. ಮಡಿಕೇರಿಯಲ್ಲಿ ಸಿದ್ದು ವಿವಾದ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಮಾಂಸಾಹಾರ ಸೇವಿಸಿ ಬಸವೇಶ್ವರ ದರ್ಶನ ಮಾಡಿದ್ದಾರೆ ಅನ್ನೋ ವಿವಾದ ಬಲವಾಗುತ್ತಿದೆ. ದೇವರು ಇಂತದ್ದೇ ಆಹಾರ ತಿಂದು ದೇವಸ್ಥಾನಕ್ಕೆ ಬನ್ನಿ ಅಂದಿದ್ದಾರಾ ಎಂದು ಸಿದ್ದು ಪ್ರಶ್ನಿಸಿದ್ದಾರೆ. ಇದು ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಅನ್ನೋ ಆರೋಪ ಹೆಚ್ಚಾಗಿದೆ.ಸಿದ್ದರಾಮಯ್ಯನವರ ಮಡಿಕೇರಿ ಯಾತ್ರೆ ಕೈಗೊಳ್ಳುವುದು ಸೂಕ್ತವಲ್ಲ. ಈ ಯಾತ್ರೆಯನ್ನು ಕೈಬಿಡಲು ನಾಯಕ ಹೆಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ. ಮೊಟ್ಟೆ ಎಸೆತ ಸೇರಿದಂತೆ ದಾಳಿಗಳು ಸಾರ್ವಜನಿಕ ಜೀವನದಲ್ಲಿ ಸಹಜ ಎಂದು ವಿಶ್ವನಾಥ್ ಹೇಳಿದ್ದಾರೆ.