Asianet Suvarna News Asianet Suvarna News

10 ಕೆಜಿ ಅಕ್ಕಿ ಕೊಡಿ ಸರ್‌, ಯಾಕೆ 5 ಕೆಜಿ ಬಗ್ಗೆ ಮಾತನಾಡುತ್ತಿದ್ದೀರಿ: ಪ್ರತಾಪ್‌ ಸಿಂಹ

ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದೆ. ನೀವು ಇದನ್ನು ಸೇರಿಸಿ 10 ಕೆಜಿ ಅಕ್ಕಿ ಕೊಡಿ ಎಂದು ಸಂಸದ ಪ್ರತಾಪ್‌ ಸಿಂಹ ಆಗ್ರಹಿಸಿದ್ದಾರೆ.
 

First Published Jun 29, 2023, 3:56 PM IST | Last Updated Jun 29, 2023, 3:56 PM IST

ಸಿಎಂ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಅನ್ನೋದು ಇದ್ರೆ, ಈಗಲಾದ್ರೂ ನುಡಿದಂತೆ ಜನರಿಗೆ 10 ಕೆಜಿ ಅಕ್ಕಿ ಕೊಡಿ. ನಿಮ್ಮದೇನು ಪೋಸ್ಟಿಂಗ್‌ ಸರ್ಕಾರವೇ ಎಂದು ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಈಗ ಏಕೆ 5 ಕೆಜಿ ಅಕ್ಕಿ ಅಂತಾ ಹೇಳುತ್ತಿದ್ದೀರಾ. ನಮ್ಮದು 40 ಪರ್ಸೆಂಟ್‌ ಸರ್ಕಾರ ಎಂದು ತಮಟೆ ಹೊಡೆದ್ರಿ. 5 ಕೆ.ಜಿ ಅಕ್ಕಿ ಕೇಂದ್ರ ಕೊಡುತ್ತಿರುವುದು ತಾನೇ, ನೀವು ನುಡಿದಂತೆ 10 ಕೆ.ಜಿಗೆ 34 ರೂ. ಹಾಗೆ ಹಣ ಕೊಡಿ ಎಂದು ಸಂಸದ ಪ್ರತಾಪ್‌ ಸಿಂಹ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ ಎಂಬುದನ್ನು ನೀವು ಒಪ್ಪಿಕೊಂಡಿದ್ದೀರಿ, ನೀವು ಏನು ಅನ್ನಭಾಗ್ಯ ಲೇಬಲ್‌ ಹಾಕಿಕೊಂಡಿದ್ರಲ್ಲ. ಅದು ಸುಳ್ಳು ಎಂದು ಈಗ ಸಾಬೀತಾಗಿದೆ ಎಂದು ಹೇಳಿದರು.

ಇದನ್ನೂ ವೀಕ್ಷಿಸಿ: ಆಟೋದಲ್ಲಿ ಬಂದ ಬಿರಿಯಾನಿ ವಾಪಸ್‌: ಸಿಎಂ ನಿವಾಸಕ್ಕೆ ಎಂಟ್ರಿ ಕೊಟ್ಟ ಬೆಂಜ್‌ನಲ್ಲಿದ್ದ ಬಿರಿಯಾನಿ !‌

Video Top Stories