BJP Politics: ಬೆಳಗಾವಿ ಬಿಜೆಪಿ ಭಿನ್ನಮತ ಶಮನಕ್ಕೆ ಪ್ರಹ್ಲಾದ್ ಜೋಶಿ ಎಂಟ್ರಿ
* ಅಭ್ಯರ್ಥಿಗಳಿಗೆ ನಾಯಕರ ಭಿನ್ನಮತದ ಟೆನ್ಷನ್ ಶುರು
* ರವಿಕುಮಾರ್ ಕರೆದಿದ್ದ ಸಭೆಗೆ ಗೈರಾಗಿದ್ದ 9 ಶಾಸಕರು
* ಎಂಎಲ್‌ಸಿ ಚುನಾವಣೆಯ ಮೇಲೂ ಕೂಡ ಭಿನ್ನಮತದ ಕರಿ ಛಾಯೆ
ಬೆಳಗಾವಿ(ಮೇ.21): ಬೆಳಗಾವಿ ಬಿಜೆಪಿಯಲ್ಲಿ ಆಂತರಿಕ ಭಿನ್ನಮತದ ಸಮರ ಶುರುವಾಗಿದೆ. ಎಂಎಲ್‌ಸಿ ಚುನಾವಣೆಯ ಮೇಲೂ ಕೂಡ ಭಿನ್ನಮತದ ಕರಿ ಛಾಯೆ ಬಿದ್ದಿದೆ. ಜೂ.13ಕ್ಕೆ ವಾಯುವ್ಯ ಶಿಕ್ಷಕ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳಿಗೆ ನಾಯಕರ ಭಿನ್ನಮತದ ಟೆನ್ಷನ್ ಶುರುವಾಗಿದೆ. ರವಿಕುಮಾರ್ ಕರೆದಿದ್ದ ಸಭೆಗೆ 9 ಶಾಸಕರು ಗೈರು ಆಗಿದ್ದರು. ಬೆಳಗಾವಿ ಭಿನ್ನಮತದ ಶಮನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಂಟ್ರಿ ಕೊಟ್ಟಿದ್ದಾರೆ. ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರಹ್ಲಾದ್ ಜೋಶಿ ಮಹತ್ವದ ಸಭೆ ನಡೆಸಲಿದ್ದಾರೆ. ಹಾಲಿ, ಮಾಜಿ ಶಾಸಕರು, ಸಂಸದರು, ಎಂಎಲ್‌ಸಿಗಳ ಜತೆ ಸಭೆ ನಡೆಸಲಿದ್ದಾರೆ. ಆದರೆ, ಈ ಸಭೆಗೆ ಜಾರಕಿಹೊಳಿ, ಕತ್ತಿ ಬ್ರದರ್ಸ್ ಬರ್ತಾರಾ ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.