Asianet Suvarna News Asianet Suvarna News

ಲಿಮಿಟ್ ಕ್ರಾಸಿಂಗ್: ಕಪಾಳಕ್ಕೆ ಹೊಡೆಯೋ ಮಾತು, ಅಸಭ್ಯ ಪೋಸ್ಟ್‌, ರಾಜಕಾರಣಿಗಳ ಹದ್ದು ಮೀರಿದ ಮಾತು..!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವ್ರನ್ನು ಟಾರ್ಗೆಟ್ ಮಾಡಿಕೊಂಡಿವೆ. ಹೋದಲ್ಲೆಲ್ಲ ಮೋದಿಯವರನ್ನು ಅಟ್ಯಾಕ್ ಮಾಡುತ್ತಿರುವ ನಾಯಕರುಗಳು ಲಿಮಿಟ್ ಕ್ರಾಸ್ ಮಾಡುತ್ತಿದ್ದಾರೆ. 

ಬೆಂಗಳೂರು(ಮಾ.27):  ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ದಿನದಿಂದ ಏರುತ್ತಿದೆ. ಎಲೆಕ್ಷನ್ ಹತ್ತಿರವಿದ್ದಾಗ ರಾಜಕೀಯ ನಾಯಕರುಗಳ ಕೆಸರೆರಚಾಟ ಸಾಮಾನ್ಯವಾದದ್ದೆ. ಇಬ್ಬರನ್ನೊಬ್ಬರು ಬೈದುಕೊಳ್ಳುವುದು, ದೂಷಿಸುವುದು ಇದೆಲ್ಲ ಸಾಮಾನ್ಯ. ಆದ್ರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವ್ರನ್ನು ಟಾರ್ಗೆಟ್ ಮಾಡಿಕೊಂಡಿವೆ. ಹೋದಲ್ಲೆಲ್ಲ ಮೋದಿಯವರನ್ನು ಅಟ್ಯಾಕ್ ಮಾಡುತ್ತಿರುವ ನಾಯಕರುಗಳು ಲಿಮಿಟ್ ಕ್ರಾಸ್ ಮಾಡುತ್ತಿದ್ದಾರೆ. 

ಸಧ್ಯದ ಕೆಲ ಇರೋದ ಪಕ್ಷಗಳ ಸ್ಥಿತಿ ಹೇಗಾಗಿದೆಯಂದ್ರೆ, ಚಿಕ್ಕ ಅವಕಾಶ ಸಿಕ್ಕರೆ ಸಾಕು ಬಿಜೆಪಿ ಮತ್ತು ಮೋದಿ ಮೇಲೆ ಮುಲಾಜಿಲ್ಲದೇ ದಾಳಿ ಶುರುವಿಟ್ಟುಕೊಳ್ತಾರೆ. ಇಲ್ಲೊಬ್ಬ ಕಾಂಗ್ರೆಸ್ ವಕ್ತಾರೆ, ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ವಿರುದ್ಧ ಅಸಹ್ಯಕರ ಪೋಸ್ಟ್ ಹಾಕಿದ್ದಾರೆ. 

Watch Video: ಇಬ್ಬರು ಮಹಿಳಾ ಮಣಿಯರ ನಡುವೆ ಟಫ್ ಫೈಟ್..ದಾವಣಗೆರೆ ಮತದಾರರ ಒಲವು ಯಾವ ಕಡೆ..?

ಬಾಲಿವುಡ್ ಬ್ಯೂಟಿ ಕ್ವೀನ್ ಕಂಗನಾ ರನೌತ್‌ಗೆ ಬಿಜೆಪಿ ಟಿಕೆಟ್ ಕೊಡುತ್ತಿದ್ದಂತೆ ಕಾಂಗ್ರೆಸ್‌ನ ಪ್ರಮುಖರೆಲ್ಲ ಕಂಗನಾ ಮೇಲೆ ಮುಗಿಬಿದ್ದಿದ್ದಾರೆ. ಇಲ್ಲೊಬ್ಬ ಕಾಂಗ್ರೆಸ್‌ನ ಮಹಾನ್ ನಾಯಕಿಯೊಬ್ಬರು ಕಂಗನಾ ಕುರಿತು ಕೊಳಕು ಮಾತುಗಳನ್ನಾಡಿದ್ದಾರೆ.  ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಏನಾದ್ರು ಹೇಳಲಿ. ಅದು ಫೇಕ್ ಐಡಿ ಅಂತಾದ್ರ ಹೇಳಲಿ ಪೋಸ್ಟ್ ಮಾಡಿದ್ದು ತಾವಲ್ಲವೆಂದಾದ್ರ ಹೇಳಲಿ. ಆದ್ರೆ, ಸುಪ್ರಿಯಾ ಅವರ ಆ ಪೋಸ್ಟ್‌ಗೆ ಕಂಗನಾ ಸಖತ್ತಾಗಿರೋ ರಿಪ್ಲೈ ಕೊಟ್ಟಿದ್ದಾರೆ.

Video Top Stories