ವಾಟಾಳ್ ಹೋರಾಟಗಳಿಗೆ ರೆಸ್ಪಾಂಡ್ ಮಾಡುತ್ತಿದ್ದ ಸಿಎಂ ಯಾರು?
ನನ್ನ ಹೋರಾಟಗಳಿಗೆ ರೆಸ್ಪಾಂಡ್ ಮಾಡುತ್ತಿದ್ದ ಮುಖ್ಯಮಂತ್ರಿ ಅಂದ್ರೆ ಅದು ವೀರೇಂದ್ರ ಪಾಟೀಲ್ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಕರ್ನಾಟಕದಲ್ಲಿ ಪೊಲೀಸರಿಗೆ ಚಡ್ಡಿ ಇದೆ, ಮದರಾಸ್'ನಲ್ಲಿ ಪ್ಯಾಂಟ್ ಇದೆ. ನಮ್ಮವರಿಗೂ ಪ್ಯಾಂಟ್ ಕೊಡಲೇ ಬೇಕು ಎಂದು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್'ಗೆ ಒತ್ತಾಯ ಮಾಡಿದ್ದೆ. ಅವರು ಒಳ್ಳೆಯ ಸಲಹೆ ಎಂದರು ಎಂದು ವಾಟಾಳ್ ನಾಗರಾಜ್ ಹೇಳಿದರು. ತಕ್ಷಣ ಐಜಿಗೆ ಫೋನ್ ಮಾಡುತ್ತಾರೆ, ಕರ್ನಾಟಕದ ಪೊಲೀಸರಿಗೂ ಪ್ಯಾಂಟ್ ಬೇಕು ಎಂದು ವಾಟಾಳ್ ನಾಗರಾಜ್ ಬೇಡಿಕೆ ಇಟ್ಟಿದ್ದಾರೆ. ಸಂಪೂರ್ಣ ವಿವರಗಳನ್ನು ಕ್ಯಾಬಿನೆಟ್'ನಲ್ಲಿ ತೀರ್ಮಾನ ತೆಗೆದುಕೊಳ್ಳುವ ಎಂದು ಹೇಳಿದರು. ಅವತ್ತು ವೀರೇಂದ್ರ ಪಾಟೀಲ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ನನ್ನ ಮಾತಿಗೆ ಬೆಲೆ ಕೊಟ್ಟು ಇಡೀ ರಾಜ್ಯದ ಪೊಲೀಸರಿಗೆ ಪ್ಯಾಂಟ್ ಕೊಟ್ಟವರು ವೀರೇಂದ್ರ ಪಾಟೀಲ್. ಇವತ್ತು ಕರ್ನಾಟಕ ಪೊಲೀರಿಗೆ ನನ್ನ ಕಂಡರೆ ಅದೆನೋ ಪ್ರೀತಿ ಅಭಿಮಾನ ಗೌರವ ಇದೆ. ಪೊಲೀಸರಿಗೆ ಆದಂತ ಅನ್ಯಾಯದ ಬಗ್ಗೆ ಮಾತಾಡಿದವರಲ್ಲಿ ಯಾರಾದರೂ ಅಂದ್ರೆ ಕರ್ನಾಟಕದಲ್ಲಿ ನಾನು ಒಬ್ಬನೆ ಎಂದು ಸುವರ್ಣ ನ್ಯೂಸ್‌ನ Political Off-Beat ಸಂದರ್ಶನಲ್ಲಿ ವಾಟಾಳ್ ನಾಗರಾಜ್ ಹೇಳಿದರು.