ಚಳವಳಿ ಆರಂಭದಿಂದ ಇಲ್ಲಿಯವರೆಗೂ ನನಗೆ ಶತ್ರುಗಳು ಇದ್ದಾರೆ: ವಾಟಾಳ್ ನಾಗರಾಜ್
ಶತ್ರುಗಳು ಎನ್ನುವುದು ಅವಿವೇವಕದ ನಿರ್ಧಾರ. ಚಳವಳಿ ಆರಂಭದಿಂದ ಇಲ್ಲಿಯವರೆಗೂ ಶತ್ರುಗಳು ಇದ್ದಾರೆ. ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ರಾಜಕೀಯ ಶತ್ರುಗಳು ನನ್ನ ಹಿಂದೆ ನನಗೆ ವಿರೋಧವನ್ನು ಮಾಡಿಕೊಂಡು ಬಂದಿದ್ದಾರೆ. ಯಾವ ವಿರೋಧಕ್ಕೂ ನಾನು ಹೆದರಲಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು. ಬೇಕಾದಷ್ಟು ನನಗೆ ತೊಂದರೆಯನ್ನು ಕೊಟ್ಟರು, ನನ್ನ ಮೇಲೆ ಕೇಸ್ ಹಾಕಿದ್ರು. ಚುನಾವಣಾ ಕೇಸ್ ಹಾಕಿದ್ರು ಹೈಕೋರ್ಟ್ ನಡೀತು. ಸುಪ್ರೀಂ ಕೋರ್ಟ್‌ಗೆ ಹೋಯ್ತು. ನನ್ನ ಶಕ್ತಿ ಎಂದು ಕುಂದಲಿಲ್ಲ ಎಂದು ಅವರು ಹೇಳಿದರು. ಯಾವತ್ತು ಜೈಲಿಗೆ ಹೋದೆ ಎಂದು ಅಂದುಕೊಂಡಿರಲಿಲ್ಲ, ಜೈಲಿನಲ್ಲಿ ನನ್ನ ಮೇಲಿನ ಅಭಿಮಾನಕ್ಕೆ ಒಳ್ಳೆಯ ತರಕಾರಿ ಹಾಕಿದ ಊಟವನ್ನು ಕೊಡುತ್ತಿದ್ದರು. ಕೈದಿಗಳ ಮನವಿಯನ್ನು ಕೇಳುತ್ತಿದ್ದೆ, ಜೀವನದಲ್ಲಿ ಚಳವಳಿ ಮಾಡದೆ ಇದ್ದರೆ ಬೇಜಾರು. ಚಳವಳಿ ಮಾಡುತ್ತಾ ಇರಬೇಕು ಎಂದು ಹೇಳಿದರು.