ಬಿಜೆಪಿ ಸಮಾವೇಷ ಮುಗಿಸಿ ಬಂದವ ಹೆಣವಾದ: ಕೊಲೆಗಾರನ ಸುಳಿವು ಕೊಟ್ಟ ಕಳ್ಳತನ

ಕಲಬುರಗಿಯಲ್ಲಿ ಬಿಜೆಪಿ ಸಮಾವೇಷ ಮುಗಿಸಿಕೊಂಡು ಬಂದಿದ್ದ ವ್ಯಕ್ತಿ, ಬೆಳಗಾಗುವಷ್ಟರಲ್ಲಿ ಕೊಲೆಯಾಗಿ ಹೋಗಿದ್ದ.

First Published Dec 2, 2022, 3:12 PM IST | Last Updated Dec 2, 2022, 3:12 PM IST

ಅವನು ಆ ಭಾಗದ ಪ್ರಭಾವಿ ರಾಜಕೀಯ ಕಾರ್ಯಕರ್ತ. ಒಂದು ಸಮುದಾಯದ ಲೀಡರ್. ಹಿಂದಿನ ದಿನ ತಾನೇ ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ. ಹಾಗಂತ ಆತ ಬಿಜೆಪಿ ಕಾರ್ಯಕರ್ತನಲ್ಲ, ಬದಲಿಗೆ ಕಳೆದ ಕೆಲ ವರ್ಷಗಳಿಂದ ಜೆಡಿಎಸ್'ನಲ್ಲಿ ಗುರುತಿಸಿಕೊಂಡಿದ್ದ. ಆದ್ರೆ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೇಲೆ ಈತ ಬಿಜೆಪಿಗೆ ಹೋಗ್ತಾನೇ ಅಂತಲೇ ಅಲ್ಲಿನ ಜನರು ಅಂದುಕೊಂಡಿದ್ರು. ಆದ್ರೆ ಅದಾಗಿ ಮಾರನೇ ದಿನವೇ ಆತ ಕೊಲೆಯಾಗಿ ಹೋಗಿದ್ದ. ಅದೂ ಕೂಡ ಭೀಕರವಾಗಿ. ಆ ಮಧ್ಯರಾತ್ರಿ ನಡೆದ ಭೀಕರ ಕೊಲೆಯಿಂದ ಕಲಬುರಗಿ ಬೆಚ್ಚಿ ಬಿದ್ದಿತ್ತು. ಬಿಜೆಪಿ ಮುಖಂಡನ ಹತ್ಯೆ ಪ್ರಕರಣ, ಖಾಕಿ ಪಡೆಗೆ ತೀವ್ರ ಸವಾಲಾಗಿತ್ತು. ಆದ್ರೆ ತನಿಖೆಗಿಳಿದ ಪೊಲೀಸರಿಗೆ ಹಂತ ಹಂತದಲ್ಲೂ ಒಂದೊಂದು ಸವಾಲು. ಹೀಗೆ ಬಿಜೆಪಿ ಕಾರ್ಯಕರ್ತನೊಬ್ಬನ ಮರ್ಡರ್ ಕೇಸ್'ನ ಪೊಲೀಸರು ಭೇದಿಸಿದ ರೀತಿ ಮತ್ತು ಆ ಕೇಸ್'ನ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Video Top Stories