ಮಕ್ಕಳೊಂದಿಗೆ ಮಕ್ಕಳಂತೆ ಆಟವಾಡಿದ ಮೋದಿ !

ಚುನಾವಣೆ ನಿಮಿತ್ತ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಕಲಬುರಗಿಯಲ್ಲಿ ಮಕ್ಕಳೊಂದಿಗೆ ಮಕ್ಕಳ ಹಾಗೆ ಆಟವಾಡಿದ್ದಾರೆ.

First Published May 3, 2023, 1:21 PM IST | Last Updated May 3, 2023, 1:24 PM IST

ಕಲಬುರಗಿ : ಚುನಾವಣೆ ನಿಮಿತ್ತ ಕರ್ನಾಟಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ನಡೆದ ಭವ್ಯ ರೋಡ್‌ಶೋನ ಭಾಗವಾಗಿ ಉತ್ಸಾಹಿ ಮಕ್ಕಳ ಗುಂಪು ಅವರನ್ನು ಹುರಿದುಂಬಿಸುವುದನ್ನು ಪ್ರಧಾನಿ ಗಮನಿಸಿ ಅವರ ಬಳಿ ಹೋಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳೊಂದಿಗೆ ಮೋದಿ ಆಟ ಸಹ ಆಡಿದ್ದಾರೆ. ಈ ನಡುವೆ ಮಕ್ಕಳಿಗೆ ಅವರ ಭವಿಷ್ಯದಲ್ಲಿ ಏನಾಗುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಓರ್ವ ಬಾಲಕ ವೈದ್ಯನಾಗುವ ಆಸೆಯನ್ನು ವ್ಯಕ್ತಪಡಿಸಿದರೆ, ಇನ್ನೊಬ್ಬ ಪೊಲೀಸ್ ಅಧಿಕಾರಿಯಾಗುತ್ತೇನೆ ಎಂದು ತಿಳಿಸಿದ್ದಾನೆ. ಮಗದೊಬ್ಬ ಬಾಲಕ ನಿಮ್ಮ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತೇವೆ ಎಂದಿದ್ದಾನೆ. ಇದಕ್ಕೆ ಮೋದಿ ಅಚ್ಚಾ.. ಎಂದಿದ್ದಾರೆ.

Video Top Stories